ಬೆಂಗಳೂರು: ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ರಾಜ್ಯ ರಾಜಕೀಯದಲ್ಲಿ ಮತ್ತೊಬ್ಬ ರಾಜಕಾರಣಿ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಹೌದು, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ವಿರುದ್ಧ ಸಂಜಯ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು ಸಾಮಾಜಿಕ ಕಾರ್ಯಕರ್ತೆ ಮೇಲೆ ಅತ್ಯಾಚಾರ ನಡೆಸಿರುವುದಾಗಿ ದೂರು ದಾಖಲಾಗಿದೆ.
ಸಂತ್ರಸ್ಥೆ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಂಡ ಬೆಂಗಳೂರಿನ ಸಂಜಯನಗರ ಪೊಲೀಸರು ಬೆದರಿಕೆ ಹಾಕಿದ ಆರೋಪದಡಿ ವಿನಯ್ ಕುಲಕರ್ಣಿ ಆಪ್ತ ಅರ್ಜುನ್ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಆಡಿಯೋ, ವಿಡಿಯೋ ಬಹಿರಂಗಪಡಿಸುವುದಿಲ್ಲ ಎಂದು ಹೇಳಿ 2 ಕೋಟಿಗೆ ಬೇಡಿಕೆಯಿಟ್ಟ ಆರೋಪ ಪ್ರತಿದೂರು ದಾಖಲಿಸಿರುವ ವಿನಯ್ ಕುಲಕರ್ಣಿ ಖಾಸಗಿ ವಾಹಿನಿ ಮುಖ್ಯಸ್ಥ, ಸಂತ್ರಸ್ತೆ ವಿರುದ್ಧ ಸುಲಿಗೆ ಪ್ರಕರಣ ದಾಖಲು ಮಾಡಿದ್ದಾರೆ.
ಪ್ರತಿ ದೂರು ಕೊಟ್ಟ ಬಳಿಕ ಶಾಸಕ ವಿನಯ್ ಕುಲಕರ್ಣಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಾನು ಅವಳನ್ನು ಟಚ್ ಮಾಡಿದ್ರೂ ಕೂಡ ನನ್ನ ತಾಯಿಯನ್ನು ಟಚ್ ಮಾಡಿದ ಹಾಗೇ ಜಸ್ಟ್ ಎರಡು ಮೂರು ಸಲ ವಿಡಿಯೋ ಕಾಲ್ ಮಾಡಿದ್ದೆನೆ ಅಷ್ಟೇ..ವಿಡಿಯೋ ಕಾಲ್ ಇಟ್ಟುಕೊಂಡು ತೋರಿಸಲಾಗ್ತಿದೆ ಇಷ್ಟು ವರ್ಷದ ರಾಜಕೀಯ ಜೀವನದಲ್ಲಿ ಬದುಕಿದ್ದಿನಿ. ಕೆಲವು ಮಂದಿ ಈ ರೀತಿ ಕೆಲಸ ಮಾಡಿಸ್ತಿದ್ದಾರೆ..ಷಡ್ಯಂತ್ರವನ್ನು ಮಾಡ್ತಿದ್ದಾರೆ. ಯಾರು ಎನು ಎಲ್ಲಾ ಗೊತ್ತಾಗುತ್ತೆನನ್ನದೇನು ಇಲ್ಲ.
ವಿಡಿಯೋ ಕಾಲ್ ಮಾಡೋದು ಸ್ಟಾರ್ಟ್ ಮಾಡಿದ್ರು..ವಾಟ್ಸಪ್ ಲಿ ಹಾರ್ಟ್ ಹಾಕೋದು ಶುರು ಆಯ್ತು. 3.5 ವರ್ಷ ಗಳಿಂದ ಯಾವುದೇ ಕಾಲ್ ಮೆಸೆಜ್ ಮಾಡಿಲ್ಲಆತರದ್ದು ಎನಿದ್ರೂ ನಾನು ಒಪ್ಪಿಕೊಳ್ತಿದ್ದೆ. ಆಡಿಯೋ ಅಲ್ಲ ಅದು ಪೋನ್ ಕಾಲ್ ಅದುಷಡ್ಯಂತ್ರ ಅಪಮಾನ ಮಾಡೋದು ತಪ್ಪು, ಬಿಜೆಪಿ ಶಾಸಕನ ವಿಡಿಯೋ ಗೆ ಸಾಕಷ್ಟು ವೆತ್ಯಾಸ ಇದೆ ಸಂತೃಸ್ತೆ ಹಿನ್ನಲೆ ಬಗ್ಗೆನೂ ವಿಚಾರಣೆ ಮಾಡಿ ಎಂದ ವಿನಯ್ ಕುಲಕರ್ಣಿ ಹೇಳಿದ್ದಾರೆ.