ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಒಂದಲ್ಲ ಒಂದು ಆರೋಪ ಮಾಡುತ್ತಿದ್ದು ಇದೀಗ ನಾಗಮಂಗಲ ಕೋಮುಗಲಭೆ ಮತ್ತು ದಾವಣಗೆರೆಯಲ್ಲಿ ನಡೆದ ಕಲ್ಲು ತೂರಾಟದ ಘಟನೆಗೆ ಸಂಬಂಧಿಸಿದಂತೆ ಇದೀಗ ಕಾಂಗ್ರೆಸ್ ಪಕ್ಷದ ವಿರುದ್ಧ ಬಿಜೆಪಿಯು ವ್ಯಂಗ್ಯವಾಗಿ ಟೀಕಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣವಾದ ಎಕ್ಸ್ ಖಾತೆಯಲ್ಲಿ ಪೋಸ್ಟ್ನನ್ನು ಹಾಕಿರುವ ಬಿಜೆಪಿಯು, ಕಾನೂನು ಉಲ್ಲಂಘಿಸುವವರಿಗೆ ರಕ್ಷಣೆ ನೀಡಲು ಸದಾ ‘ಸಿದ್ದ’ ಸರ್ಕಾರ ಎಂದು ವ್ಯಂಗ್ಯಚಿತ್ರವೊಂದನ್ನು ಪ್ರಕಟಿಸಿ ಟೀಕಿಸಿದೆ. ಇದನ್ನೂ ಓದಿ: ಬಿಜೆಪಿ ಶಾಸಕ ಮತ್ತೆ ಅರೆಸ್ಟ್
ನಾಗಮಂಗಲದಲ್ಲಿ ಬಿಜೆಪಿ ನಾಯಕರ ವಿರುದ್ಧ ಎಫ್ಐಆರ್. ನಾವು ಬೆಂಕಿ ಹಚ್ಚಿದವರನ್ನು ಬಂಧಿಸಲ್ಲ, ಅದನ್ನು ವಿರೋಧಿಸುವವರನ್ನು ಮಾತ್ರ ಬಂಧಿಸೋದು’ ಎಂದು ಸಿಎಂ ಸಿದ್ದರಾಮಯ್ಯ ಹೇಳುವ ಬರಹದೊಂದಿಗೆ ವ್ಯಂಗ್ಯಚಿತ್ರ ರಚಿಸಲಾಗಿದೆ.
ಕಾನೂನನ್ನು ಉಲ್ಲಂಘಿಸುವವರಿಗೆ ರಕ್ಷಣೆ ನೀಡಲು ಸದಾ “ಸಿದ್ದ” ಸರ್ಕಾರ!!#CongressFailsKarnataka pic.twitter.com/DH25Y5ipWH
— BJP Karnataka (@BJP4Karnataka) September 20, 2024