ಬೆಂಗಳೂರು: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದ್ದು ಎಲ್ಲಾ ಅಭ್ಯರ್ಥಿಗಳು ನಾಮಪತ್ರಿಕೆಯನ್ನು ಸಲ್ಲಿಸಿ ಮತ ಬೇಟೆ ಶುರು ಮಾಡಿದ್ದಾರೆ. ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಡಿಕೆ ಸುರೇಶ ರವರು ಸ್ಪರ್ಧಿಸುತ್ತಿದ್ದಾರೆ. ಹಾಗೆ ಬಿಜೆಪಿ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಅವರು ಸ್ಪರ್ಧಿಸುತ್ತಿದ್ದಾರೆ. ಈ ಬಾರಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ತೀವ್ರ ಕುತುಹಲಕಾರಿಗೆ ಕಾರಣವಾಗಿದೆ.
ಬೆಂಗಳೂರು: ಅವರ ದುರಂಹಕಾರ ಇಳಿಸಲು ಡಾ.ಸಿಎನ್ ಮಂಜುನಾಥ್ ಅವರನ್ನ ಕಣಕ್ಕಿಳಿಸಿದ್ದೇವೆ. ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಅವರು ಗೆಲ್ಲಬೇಕು ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ಇಂದು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಯೋಗೇಶ್ವರ್ ಹೇಳಿದಂತೆ ಡಿಕೆ ನೋಟು ಡಾಕ್ಟರ್ ಗೆ ಓಟು. ನಾವು ವಿಶೇಷ ರಣತಂತ್ರ ಮಾಡುವ ಅವಶ್ಯಕತೆ ಇಲ್ಲ. ಡಾ. ಮಂಜುನಾಥ್ ಅವರ ಬಗ್ಗೆ ಯಾರಿಗೂ ಹೇಳುವ ಅವಶ್ಯಕತೆ ಇಲ್ಲ ಎಂದರು.
ಎರಡು ವರ್ಷದಲ್ಲಿ ಏನು ಕೆಲಸ ಮಾಡಿದ್ದಾರೆ ಎಂದು ಗೊತ್ತಿದೆ. ಕಾಸು ಕೊಟ್ಟು ಕಾಲಿಗೆ ಬೀಳುತ್ತಿದ್ದಾರೆ. ಮತಗಳು ಹೆಚ್ಚಿರುವ ಮನೆಗೆ ಹೋಗಿ ಗೋಗರಿಯುತ್ತಿದ್ದಾರೆ. ಕೂಪನ್ ಕಾರ್ಡ್ ತಂದಿದ್ದಾರೆ ಎಂದು ಡಿಕೆ ಬ್ರದರ್ಸ್ ವಿರುದ್ದ ಹೆಚ್.ಡಿಕೆ ವಾಗ್ದಾಳಿ ನಡೆಸಿದರು.