ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು, ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಐದು ಗ್ಯಾರಂಟಿಯನ್ನು ಬಹಳ ಅದ್ದೂರಿಯಾಗಿ ರಾಜ್ಯದಲ್ಲೆಡೆ ಜಾರಿಯಾಗಿದೆ ಇದರಿಂದ ರಾಜ್ಯದ ಎಲ್ಲಾ ಜನರು ಸಂತೋಷವನ್ನು ವ್ಯಕ್ತಪಡಿಸುತ್ತಿದ್ದಾರೆ.
ಹೆಣ್ಣು ಮಕ್ಕಳು ಅಂದರೆ ಕುಟುಂಬದ ಕಣ್ಣು ಇದ್ದಂತೆ. ಹೀಗಾಗಿ ಅವರ ಖಾತೆಗೆ ಹಣ ಹಾಕುತ್ತಿದ್ದೇವೆ.ನಾವು ಗಂಡಸರನ್ನು ಯಾವ ಕಾರಣಕ್ಕೂ ನಂಬಲ್ಲ. ವೈನ್ ಶಾಪ್ ಗೆ ಹೋಗಿ ದುಡ್ಡು ಹಾಳು ಮಾಡಿಕೊಳ್ಳುತ್ತಾರೆ ಹೀಗಾಗಿ ಹೆಣ್ಣು ಮಕ್ಕಳಿಗೆ 2000ಗಳನ್ನು ನೀಡುತ್ತಿದ್ದೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹಾಸ್ಯ ಚಟಾಕಿ ಹರಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ನಮ್ಮ ಗ್ಯಾರಂಟಿ ಬಿಜೆಪಿ ಅವರಿಂದ ಕಾಪಿ ಮಾಡಲಾಗಿದೆ. ಗ್ಯಾರಂಟಿ ಅನುಷ್ಠಾನ ಆಗಲ್ಲ ಅಂತ ಆರೋಪಿಸಿದರು.ಈಗ ಮೋದಿ ಗ್ಯಾರಂಟಿ ಅಂತ ಮಾಡಿಕೊಂಡಿದ್ದಾರೆ. ಗ್ಯಾರಂಟಿ ಜಾರಿಯಾದ ಬಳಿಕ 2 ಸಾವಿರ ತಗೊಂಡು ಜನರು ನೆಮ್ಮದಿಯಾಗಿದ್ದಾರೆ ಎಂದರು.
ನಮ್ಮ ಗ್ಯಾರೆಂಟಿ ಬಿಜೆಪಿ ಅವರಿಂದ ಕಾಪಿ ಆಗಿದೆ. ಗ್ಯಾರಂಟಿ ಅನುಷ್ಠಾನ ಆಗಲ್ಲ ಅಂತ ಆರೋಪಿಸಿದರು. ಈಗ ಮೋದಿ ಗ್ಯಾರಂಟಿ ಹಂತ ಮಾಡಿಕೊಂಡಿದ್ದಾರೆ.ಮೋದಿಯವರು ಗ್ಯಾರೆಂಟಿ ಜಾರಿ ಮಾಡಕ್ಕಾಗಲ್ಲ ಸರ್ಕಾರ ಬರಬಾರ್ದಾಗುತ್ತೆ ಎಂದಿದ್ದರು.ಈಗ ನಮ್ಮ ಗ್ಯಾರಂಟಿ ನೋಡಿ ಬಿಟ್ಟು ಮಧ್ಯಪ್ರದೇಶದಲ್ಲಿ ಚುನಾವಣೆ ಮುಂಚೆ ಅದನ್ನು ಕೊಟ್ಟರು.
ನಾವು ಕೊಟ್ಟಿರುವ ಗ್ಯಾರಂಟಿಗಳನ್ನು ನೋಡಿ ಮೋದಿ ಗ್ಯಾರಂಟಿ ಎಂದು ಹೇಳಿದರು. ಯಾವತ್ತು ಕೂಡ ಬಿಜೆಪಿ ಗ್ಯಾರಂಟಿ ಎಂದು ಎಲ್ಲೂ ಹೇಳಿಕೊಂಡಿಲ್ಲ ಆದರೆ ನಮ್ಮದು ಕಾಂಗ್ರೆಸ್ ಗ್ಯಾರಂಟಿ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮೋದಿ ವಿರುದ್ಧ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.