ಬೆಂಗಳೂರು: 5,8,9 ಮತ್ತು 11ನೇ ತರಗತಿಗಳಿಗೆ ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಪಬ್ಲಿಕ್ ಪರೀಕ್ಷೆಗೆ ಸಂಬಂಧಿಸಿ ಬಿಗ್ ಅಪ್ಡೇಟ್ ಬಂದಿದೆ. ರಾಜ್ಯ ಹೈಕೋರ್ಟ್‌ನ ಏಕಸದಸ್ಯ ಪೀಠವು ಪಬ್ಲಿಕ್ ಪರೀಕ್ಷೆಗೆ ವಿಧಿಸಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್‌ನ ವಿಭಾಗೀಯ ಪೀಠ ತೆರವುಗೊಳಿಸಿದೆ. ಹೀಗಾಗಿ ಮಾರ್ಚ್ 11ರ ಇಂದಿನಿಂದ ಬೋರ್ಡ್ ಎಕ್ಸಾಂಗಳು ಎಂದಿನಂತೆ ನಡೆಯಲಿವೆ.
5,8,9 ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಅನುಮತಿ ಕೊಟ್ಟ ವಿಚಾರವಾಗಿ ಇಂದಿನ ತನಕೂ ಸಂಘರ್ಷಗಳೇ ನಡೆಯುತ್ತಿದ್ದರೂ ಅದರ ಮಧ್ಯೆ ಇಂದಿನಿಂದ ಬೋರ್ಡ್ ಎಕ್ಸಾಂ ಶುರುವಾಗಿದ್ದು ಸರ್ಕಾರ ಸಿದ್ದಪಡಿಸಿರುವ ಪ್ರಶ್ನೆ ಪತ್ರಿಕೆಗೆ ಆಯಾ ಶಾಲೆಗಳಲ್ಲೇ ಮಕ್ಕಳು ಪರೀಕ್ಷೆ ಬರೆಯುತ್ತಿದ್ದಾರೆ.
5ನೇ ತರಗತಿ ಪರೀಕ್ಷೆಗಳು ನಿಗದಿಯಂತೆ ಮಾ.11ರಿಂದ 14ರ ವರೆಗೆ, 8, 9ನೇ ತರಗತಿಗೆ ಮಾ.11- 18ರವರೆಗೆ ಪರೀಕ್ಷೆಗಳು ನಡೆಯಲಿವೆ. ಎಲ್ಲ ಮಕ್ಕಳಿಗೂ ಮಧ್ಯಾಹ್ನ 2.30ಕ್ಕೆ ಪರೀಕ್ಷೆ ಆರಂಭವಾಗಲಿದ್ದು ಕ್ರಮವಾಗಿ 4.30ರವರೆಗೆ, ಸಂಜೆ 5, 5.15ಕ್ಕೆ ಮುಕ್ತಾಯ ವಾಗಲಿವೆ.