ಬೆಂಗಳೂರು: ಪುಟಾಣಿ ಮಕ್ಕಳಿಂದ ದೊಡ್ಡವರು ಸೇರಿ ಎಲ್ಲರೂ ಇಷ್ಟಪಡುವ, ಸಂಜೆ ಟೈಮ್ನಲ್ಲಿ ಬಾಯಿ ಚಪ್ಪರಿಸಿ ತಿನ್ನುವ ತಿಂಡಿ ಗೋಬಿ ಹಾಗೂ ಕಾಟನ್ ಕ್ಯಾಂಡಿ ಈ ತಿಂಡಿ ಪ್ರಿಯರಿಗೆ ಕಾದಿದೆ ಬಿಗ್ ಶಾಕ್..
ರಾಜ್ಯದಲ್ಲಿ ಗೋಬಿ ಮಂಚೂರಿ ಕಾಟನ್ ಕ್ಯಾಂಡಿ ಬ್ಯಾನ್ ಆಗುವ ಸಾಧ್ಯತೆ ಇದೆ. ಇಂದು ಮಧ್ಯಾಹ್ನ 12 ಗಂಟೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಲಿದ್ದಾರೆ.
ಗೋಬಿ ಮಂಚೂರಿ ಕಾಟನ್ ಕ್ಯಾಂಡಿಯಲ್ಲಿ ಕೃತಕ ಬಣ್ಣ ರಾಸಾಯನಿಕ ಮಿಶ್ರಣ ಮಾಡುವ ಹಿನ್ನೆಲೆಯಲ್ಲಿ ಈ ಹಿಂದೆ ವಿವಿಧ ಸಾಂಪಲ್ ಗಳನ್ನು ಪರೀಕ್ಷೆಗೆ ನೀಡಲಾಗಿತ್ತು ನೂರಕ್ಕೂ ಹೆಚ್ಚು ಮಾದರಿಯ ಗೋಬಿ ಹಾನಿಕಾರಕ ಎಂದು ವರದಿ ಬಂದಿತ್ತು ಈಗಾಗಲೇ ಆರೋಗ್ಯ ಇಲಾಖೆ ವರದಿ ಸಲ್ಲಿಸಲಾಗಿದೆ.
ಹತ್ತಾರು ಮಾದರಿಯ ಕಾಟನ್ ಕ್ಯಾಂಡಿ ಅಸುರಕ್ಷಿತ ಎನ್ನುವುದು ಸಾಬೇತಾಗಿದೆ ಆಹಾರ ಸುರಕ್ಷತೆ ಕಾಯಿದೆ ಅಡಿ ಆರೋಗ್ಯ ಇಲಾಖೆ ಕ್ರಮಕ್ಕೆ ಮುಂದಾಗಿದೆ ಅಧಿಕೃತ ಘೋಷಣೆ ಹೊರಡಿಸುವ ಸಾಧ್ಯತೆ ಇದೆ.