ಬೆಂಗಳೂರು: ಸ್ಯಾಂಡಲ್ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ ಮಾರ್ಟಿನ್ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸುಮಾರು ಎರಡು ವರ್ಷಗಳಿಂದ ಶೂಟಿಂಗ್ ಹಂತದಲ್ಲೇ ಇದ್ದ ಈ ಮಸ್ತ್ ಮಾಸ್ ಚಿತ್ರ ಸದ್ಯ ಕುಂಬಳ ಕಾಯಿ ಒಡೆಯಲಾಗಿದೆ.
ಮಾರ್ಟಿನ್ ಸಿನಿಮಾದ ಚಿತ್ರೀಕರಣ ಕೆಲವು ತಿಂಗಳಿಂದ ನಡೆಯುತ್ತಲೇ ಇದ್ದು, ಸದು ಈ ಚಿತ್ರ ಕೊನೆಯಯ ಹಂತದ ಶೂಟಿಂಗ್ ಅನ್ನು ಬದಾಮಿಯಲ್ಲಿ ಮಾಡುವುದರ ಮೂಲಕ ಸಿನಿಮಾದ ನಿರ್ದೇಶಕ ಎ.ಪಿ.ಅರ್ಜುನ್ ಕುಂಬಳಕಾಯಿಯನ್ನು ಒಡೆದಿದ್ದಾರೆ. ಹಲವಾರು ದಿನಗಳಿಂದ ಮಾರ್ಟಿನ್ ಚಿತ್ರ ಯಾವ ಹಂತಕ್ಕೆ ಬಂತು ಎಂಬುವ ಕುತೂಹಲಕ್ಕೆ ಉತ್ತರ ಸಿಕ್ಕಿದೆ.
ಇನ್ನೊಂದೆಡೆ ಮಾರ್ಟಿನ್ ಸಿನಿಮಾದ ಚಿತ್ರೀಕರಣದ ಜೊತೆಗೆ ಕೆಡಿ ಚಿತ್ರದ ಶೂಟಿಂಗ್ ಕೂಡ ಮುಗಿದಿದೆ. ಡೈರೆಕ್ಟರ್ ಪ್ರೇಮ್ ಇದೇ ವರ್ಷ ಕೆಡಿನ ಚಿತ್ರ ರಿಲೀಸ್ ಮಾಡುವುದಾಗಿ ಘೋಷಣೆ ಮಾಡಿದ್ದು, ಅದಕ್ಕಾಗಿ ತಯಾರಿಗಳನ್ನು ಸಹ ಮಾಡಿಕೊಳ್ಳುತ್ತಿದ್ದಾರೆ. ಸದ್ಯಕ್ಕೆ ಮತ್ತೆ ಅಭಿಮಾನಿಗಳಲ್ಲಿ ಮೂಡಿರುವ ಅನುಮಾನವೇನೆಂದರೆ ಮೊದಲು ಯಾವ ಸಿನಿಮಾ ತೆರೆಗೆ ಬರಲಿದೆ ಅಂತ. ಆದರೇ ಮಾರ್ಟಿನ್ ರಿಲೀಸ್ ಬಗ್ಗೆ ಚಿತ್ರತಂಡವೇ ಮಾಹಿತಿ ನೀಡಬೇಕಿದೆ.