ಬೆಂಗಳೂರು: ದೆಹಲಿಯಲ್ಲಿ ವುಮೇನ್ ಪ್ರೀಮಿಯರ್ ಪಂದ್ಯಗಳು ನಡೆಯುತ್ತಿದ್ದು ಡೆಲ್ಲಿ ಕ್ಯಾಪಿಟಲ್ಸ್ ತಂಡ ಹೋಂ ಗ್ರೌಂಡಲ್ಲಿ ಡಿಪೆಂಡಿಂಗ್ ಚಾಂಪಿಯನ್ಸ್ ಮುಂಬೈ ಇಂಡಿಯನ್ ಜೊತೆ ಭರ್ಜರಿ ಜಯಸಾಧಿಸುವ ಮೂಲಕ ಶುಭ ಆರಂಭ ಮಾಡಿದೆ.
ದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ಇಂದು ನಡೆಯಲಿರುವ ವುಮೆನ್ಸ್ ಪ್ರೀಮಿಯರ್ ಲೀಗ್ನ 13ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈಗಾಗಲೇ ನಾಲ್ಕು ಪಂದ್ಯಗಳನ್ನಾಡಿರುವ ಗುಜರಾತ್ ಜೈಂಟ್ಸ್ ತಂಡವು ಇದುವರೆಗೆ ಒಂದೇ ಒಂದು ಪಂದ್ಯ ಗೆದ್ದಿಲ್ಲ.
ಈ ಮೂಲಕ ಪಟ್ಟಿಯಲ್ಲಿ ಮೊದಲನೇ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಜೈಂಟ್ಸ್ ಮುಖಾಮುಖಿ ಆಗುತ್ತಿವೆ. ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿರುವ ಗುಜರಾತ್ ಜೈನ್ಸ್ ತನ್ನ ಮೊದಲ ಜಯದ ಹುಡುಕಾಟದಲ್ಲಿದೆ ಗುಜರಾತ್ ತಂಡಕ್ಕೆ ಉಳಿದಿರುವ ಇನ್ನೂ ನಾಲ್ಕು ಪಂದ್ಯಗಳಲ್ಲೂ ಜಯ ಸಿಕ್ಕರೆ ಮಾತ್ರ ಸೆಮಿ ಫೈನಲ್ ಗೆ ಬರುವ ಅವಕಾಶವಿದೆ. ಇನ್ನುಳಿದಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಟಗಾರತಿಯರು ಈ ಬಾರಿ ಭರ್ಜರಿ ಫಾರ್ಮ್ ನಲ್ಲಿದ್ದು ತಮ್ಮ ಸೆಮಿ ಫೈನಲ್ ಸ್ಥಾನವನ್ನು ಖರ್ಚುಪಡಿಸಿಕೊಳ್ಳಲು ಸಜ್ಜಾಗಿದ್ದಾರೆ.