ಬೆಂಗಳೂರು: ರಾಜ್ಯದಲ್ಲಿ ಇವತ್ತು ತಾಲಿಬಾನಿ ಸರ್ಕಾರ ನಡೀತಿದೆ ಎಂಬುದಕ್ಕೆ ಬಹಳಷ್ಟು ಘಟನೆಗಳು ಸಾಕ್ಷಿಯಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು 2023ರ ವಿಧಾನಸಭಾ ಚುನಾವಣೆ ಪ್ರಚಾರದಲ್ಲೇ ಹೇಳಿದ್ದೆ. ನೀವು ಕಾಂಗ್ರೆಸ್ ಗೆ ವೋಟ್ ಹಾಕಿದ್ರೆ ತಾಲಿಬಾನಿ ಸರ್ಕಾರ ಬರುತ್ತೆ ಎಂದಿದ್ದೆ. ಇವತ್ತು ತಾಲಿಬಾನಿ ಸರ್ಕಾರ ನಡೀತಿದೆ ಎಂಬುದಕ್ಕೆ ಬಹಳಷ್ಟು ಘಟನೆಗಳು ಸಾಕ್ಷಿ ಆಗಿದೆ. ವಿಧಾನಸೌಧದ ಒಳಗೆ ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಮೊಳಗಿದೆ ಅಂದ್ರೆ ಯಾರು ಅಧಿಕಾರ ಮಾಡ್ತಿದ್ದಾರೆ ಅನ್ನೋದು ಸ್ಪಷ್ಟ ಆಗಿದೆ.
ಕಾಂಗ್ರೆಸ್ ಮುಂದುವರಿದರೆ ವಿಧಾನಸೌಧ ಗೋಪುರದ ಮೇಲೆ ಮೈಕ್ ಇಟ್ಟು ಆಜಾನ್ ಕೂಗಿದ್ರೂ ಆಶ್ಚರ್ಯ ಪಡಬೇಡಿ. ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಹತ್ತು ವರ್ಷಗಳ ಕಾಲ ಸರಣಿ ಬಾಂಬ್ ಬ್ಲಾಸ್ಟ್‌ಗಳು ನಡೆದಿದ್ದವು. ಈಗ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಹಾಗಾಗಿ ಬಾಂಬ್ ಬ್ಲಾಸ್ಟ್‌ಗಳು ಪ್ರಾರಂಭವಾಗಿದ್ದು, ಇದು ಟ್ರೈಲರ್ ಅಷ್ಟೆ, ಮುಂದೆ ಇನ್ನೂ ದುರ್ಘಟನೆಗಳು ಕಾದಿವೆ ಎಂದು ಆತಂಕ ವ್ಯಕ್ತಪಡಿಸಿದರು.