ಬೆಂಗಳೂರು: ರಾಜ್ಯ ಸಭಾ ಚುನಾವಣೆಗೆ ಮತದಾನ ಆರಂಭವಾಗಿದೆ. ವಿಧಾನಸೌಧದ ಕೊಠಡಿ ಸಂಖ್ಯೆ 106 ರಲ್ಲಿ ಮತದಾನ ಪ್ರಕ್ರಿಯೆ ಪ್ರಾರಂಭವಾಗಿದೆ. ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಮತದಾನ ನಡೆಯುತ್ತಿದೆ.
ರಾಜ್ಯಸಭಾ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಈ ಕುರಿತು ಮಾತನಾಡಿದ ಅವರು, ನಮ್ಮ ಪ್ರಕಾರ ಜೆಡಿಎಸ್ ಐದನೇ ಅಭ್ಯರ್ಥಿ ಹಾಕಬಾರದಿತ್ತು ಆದ್ರು ಹಾಕಿದಾರೆ ಜೆಡಿಎಸ್ ಪಕ್ಷದವರಿಗೆ ಆತ್ಮನೇ ಇಲ್ಲ….ಆತ್ಮ ಸಾಕ್ಣಿ ಎಲ್ಲಿದೆ.. ಯಾರ ಜೊತೆ ಸೇರ್ಕೊಂಡಿದಾರೆ.. ಅವರು ಜೆಡಿಎಸ್ ಐದನೇ ಅಭ್ಯರ್ಥಿ ಹಾಕಿದ್ರಿಂದ ನಾವು ಒಟ್ಟಾಗಿ ಬಂದು ಮತ ಹಾಕಿದ್ವಿ ನಮ್ಮ ಮೂವರು ಅಭ್ಯರ್ಥಿಗಳು ಗೆಲ್ತಾರೆ ಎಂದು ಮೈತ್ವಿರಿಗೆ ಟಾಂಗ್ ನೀಡಿದ್ದರು.
ನಾವು ಯಾರಿಗೂ ಆಸೆ ಆಮಿಷ ನೀಡಿಲ್ಲ 135+1 ಮತಗಳಿವೆ.. ಪಕ್ಷೇತರರ ಲತಾ ಮಲ್ಲಿಕಾರ್ಜುನ್ ,ದರ್ಶನ್ ಪುಟ್ಟಣ್ಣಯ್ಯ,ಪುಟ್ಡ ಸ್ವಾಮಿಗೌಡ,ಜನಾರ್ದನ ರೆಡ್ಡಿ ಇದಾರೆ.ಅವರೆಲ್ಲರೂ ನಮ್ಮ ಅಭ್ಯರ್ಥಿ ಪರ ಮತದಾನ ಮಾಡಲಿದ್ದಾರೆ.
ಜೆಡಿಎಸ್,ಬಿಜೆಪಿ ಅವರು ಆಮಿಷ,ಬೆದರಿಕೆ ನೀಡೋದು ನಾವಲ್ಲ ಬೇರೆ ಪಕ್ಣಗಳಿಂದಲೂ ನಮಗೆ ಅಭಿವೃದ್ಧಿ ಮೆಚ್ಚಿ ಮತಗಳು ಬರಬಹುದು ಬೇರೆ ಪಕ್ಣಗಳಿಂದಲೂ ನಮಗೆ ಅಭಿವೃದ್ಧಿ ಮೆಚ್ಚಿ ಮತಗಳು ಬರಬಹುದು ಎಂದು ಸಿಎಂ ಸಿದ್ರಾಮಯ್ಯ ಹೇಳಿದರು.