ಬೆಂಗಳೂರು: ಗೋಬಿ ಮಂಚೂರಿ ಎಲ್ಲರ ಫೇವರೇಟ್. ಹೆಸರು ಕೇಳಿದ ತಕ್ಷಣ ಬಾಯಲ್ಲಿ ನೀರೂರಿಸೋ ತಿಂಡಿ. ಆದ್ರೀಗ, ಗೋಬಿಗೆ ಕಂಟಕ ಶುರುವಾಗಿದೆ. ಗೋವಾ ರೀತಿಯಲ್ಲಿ ರಾಜ್ಯದಲ್ಲೂ ಗೋಬಿ ಬ್ಯಾನ್ ಮಾಡಲು ಎಲ್ಲ ರೀತಿಯ ತಯಾರಿಗಳು ನಡೆಯುತ್ತಾ ಇದ್ದು, ಆದಷ್ಟೂ ಬೇಗ ಗೋಬಿ ಪ್ರಿಯರಿಗೆ ಶಾಕ್ ನೀಡುವ ಸಾಧ್ಯತೆಗಳಿವೆ.
ಗೋಬಿ ಮಂಚೂರಿ ಮಾಡಲು ಬಳಸುವ ಮೈದಾ, ಸಾಸ್, ಕೃತಕ ಬಣ್ಣ ಹಾಗೂ ಟೇಸ್ಟಿಂಗ್ ಪೌಡರ್‌ಗಳೆಲ್ಲವೂ ಜೀವಕ್ಕೆ ಅಪಾಯಾಕಾರಿಯಾಗಿದೆ ಎಂಬುದು ಬೆಳಕಿಗೆ ಬಂದಿದೆ. ಮುಖ್ಯವಾಗಿ ಮೈದಾ, ಚೈನೀಸ್ ಸಾಸ್‌ಗಳು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚು ಮಾಡುತ್ತದೆ. ದೇಹದಲ್ಲಿ ಸೋಡಿಯಂ ಪ್ರಮಾಣವನ್ನು ಹೆಚ್ಚಿಸಿ ರಕ್ತದೊತ್ತಡದ ಜೊತೆಗೆ ತೂಕವನ್ನು ಕೂಡ ಹೆಚ್ಚಿಸುತ್ತದೆ. ಇದರಿಂದಾಗಿ ದೇಹದ ಕೊಬ್ಬಿನ ಅಂಶಗಳು ಹೆಚ್ಚಾಗಿ ಹೃದಯದ ರಕ್ತನಾಳ ಕ್ಲೋಸ್ ಆಗುವ ಸಾಧ್ಯತೆ ಇದ್ದು, ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಮೂತ್ರಕೋಶಕ್ಕೆ ಸಂಬಂಧಿಸಿದಂತಹ ಖಾಯಿಲೆಗಳು ಮನುಷ್ಯನನ್ನು ಕಾಡೋ ಸಾಧ್ಯತೆಯಿದೆ.