ಉಮಾಪತಿಗೆ ಅಯ್ಯೋ ತಗಡು ಎಂದ ದರ್ಶನ್!

ಉಮಾಪತಿಗೆ ಅಯ್ಯೋ ತಗಡು ಎಂದ ದರ್ಶನ್!

ಬೆಂಗಳೂರು: ನಟ ದರ್ಶನ್​ ಅವರು ಕಾಟೇರ  ಸಿನಿಮಾದ ಮೂಲಕ ದೊಡ್ಡ ಗೆಲುವು ಕಂಡಿದ್ದಾರೆ. ಈ ಚಿತ್ರದ 50ನೇ ದಿನದ ಸೆಲೆಬ್ರೇಷನ್​ ಅನ್ನು ಬೆಂಗಳೂರಿನ ಪ್ರಸನ್ನ ಚಿತ್ರಮಂದಿರದಲ್ಲಿ ಮಾಡಲಾಗಿದೆ.

ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣ, ತರುಣ್ ಸುದೀರ್‌ ನಿರ್ದೇಶನದಲ್ಲಿ ಮೂಡಿ ಬಂದಿರುವ ಕಾಟೇರ ಸಿನಿಮಾ 50ನೇ ದಿನದ ಸಂಭ್ರಮ ಆಚರಣೆ ಮಾಡುತ್ತಿದೆ. ನಟ ದರ್ಶನ್‌ ಗೆ ಕನಸಿನ ರಾಣಿ ಮಾಲಾಶ್ರೀ ಪುತ್ರಿ ನಾಯಕಿಯಾಗಿ ಮಿಂಚಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ವಿದೇಶದಲ್ಲೂ ಕಾಟೇರ ಸದ್ದು ಜೋರಾಗಿದೆ. ಆದರೆ ಈ ನಡುವೆ ಕಾಟೇರ ಟೈಟಲ್ ಕೊಟ್ಟಿದ್ದು ಯಾರು ಅನ್ನೋ ಗೊಂದಲವಿತ್ತು. ಕಾಟೇರ ಟೈಟಲ್ ಕೊಟ್ಟಿದ್ದು ನಾನೇ ಎಂದು ಹೇಳಿಕೆ ನೀಡಿರುವ ಉಮಾಪತಿ ಶ್ರೀನಿವಾಸ್‌ರವರಿಗೆ ದರ್ಶನ್ ಕ್ಲಾರಿಟಿ ನೀಡಿದ್ದಾರೆ.

‘ಕೆಲವರು ಹೇಳಿದರು ಕಥೆ ನಾನು ಮಾಡಿಸಿದೆ ಟೈಟಲ್ ನಾನು ಕೊಟ್ಟೆ ಅಂತ. ಅಯ್ಯೋ ತಗಡೇ. ನಿನಗೆ ರಾಬರ್ಟ್‌ ಕಥೆ ಕೊಟ್ಟಿದ್ದೇ ನಾವು. ಯಾವತ್ತೂ ಕೊಟ್ಟಿದ್ದು ಮಾಡಿದ್ದು ಹೇಳಬಾರದು. ಭಗವಂತ…ಈಗಾಗಲೆ ಒಂದು ಸಲ ಸಿಗಾಕೊಂಡು ಬಾಯಿಂದ ಹೇಳಿಸಿಕೊಂಡು ಬುದ್ಧಿ ಕಲಿತಿಲ್ಲ ಅಂದ್ರೆ ನಾವು ಏನ್ ಹೇಳೋಣ. ಇಂಥ ಹಳ್ಳೆ ಕಥೆಯನ್ನು ಯಾಕಪ್ಪಾ ಬಿಟ್ಟೆ ನೀನು?ನೀನು ಮಾಡಿಸಿ ಅಂದ್ಮೇಲೆ ಯಾಕೆ ಕಥೆ ಬಿಟ್ಟೆ? ನಿನ್ನ ಜಡ್ಜ್‌ಮೆಂಟ್ ಅಷ್ಟು ಚೆನ್ನಾಗಿದೆ ಅಂದ್ಮೇಲೆ ಸಿನಿಮಾ ಮಾಡ್ಬೋದಿತ್ತು ಅಲ್ವಾ? ಟೈಟಲ್ ನಾನು ಕೊಟ್ಟೆನಾ?……ಟೈಟಲ್ ಇಟ್ಟಿದ್ದೇ ನಾನು. ಅದಕ್ಕೊಂದು ಕ್ಲಾರಿಟಿ ಕೊಡುತ್ತೀನಿ.

‘ಯಾಕಪ್ಪಾ ಬಂದು ಬಂದು ನಮ್ಮ ಕೈಯಲ್ಲಿ ಗುಮ್ಮಿಸಿಕೊಳ್ಳುತ್ತೀಯಾ? ಗುಮ್ಮಿಸಿಕೊಳ್ಳಬೇಡ. ಎಲ್ಲೋ ಇದ್ಯಾ ಚೆನ್ನಾಗಿದ್ಯಾ ಅಲ್ಲೇ ಇದ್ದು ಬಿಡು. ತಪ್ಪು ಅದು. ಇಷ್ಟೇ ಕ್ಲಾರಿಫೈ ಮಾಡಿದ್ದು’ ಎಂದಿದ್ದಾರೆ ದರ್ಶನ್.

ಫ್ರೆಶ್ ನ್ಯೂಸ್

Latest Posts

Featured Videos