ಅರುಣ್‌ ಯೋಗಿ ಅವರಿಗೆ ರಾಜ್ಯಪಾಲರಿಂದ ಸನ್ಮಾನ

ಅರುಣ್‌ ಯೋಗಿ ಅವರಿಗೆ ರಾಜ್ಯಪಾಲರಿಂದ ಸನ್ಮಾನ

ಬೆಂಗಳೂರು: ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿದ ಬಾಲರಾಮನ ವಿಗ್ರಹವನ್ನು ಶಿಲ್ಪಿ ಅರುಣ್ ಯೋಗಿರಾಜ್ ಅವರು ಕೆತ್ತನೆ ಮಾಡಿದ್ದಾರೆ. ಈ ವಿಗ್ರಹವನ್ನು ಅಯೋಧ್ಯ ರಾಮಮಂದಿರದಲ್ಲಿ ಜನವರಿ 21 ಪ್ರತಿಸ್ಥಾಪನೆ ಮಾಡಿದ್ದಾರೆ. ಈ ಸುಂದರ ವಿಗ್ರಹವು ಇಡೀ ದೇಶದ ಜನರ ಮನಸೋತಿದ್ದಾರೆ. ಎಲ್ಲೆಡೆ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ  ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಯೋಧ್ಯೆಯ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಿದ ಬಾಲ ರಾಮನ ವಿಗ್ರಹವನ್ನು ಕೆತ್ತನೆ ಮಾಡಿದ ಮೈಸೂರಿನ ಶಿಲ್ಪಿ ಅರುಣ್ ಯೋಗಿ ರಾಜ್ ಅವರನ್ನು ರಾಜ್ಯಪಾಲ ಥಾವತ್ ಚಂದ್ರ ಗೆಲ್ಲೋಟ್ ಸನ್ಮಾನಿಸಿದರು. ಅರುಣ್ ಅವರು ತಮ್ಮ ಪತ್ನಿ ವಿಜೇತ‌, ಮಗಳು ಸಾನ್ವಿ, ಮತ್ತು ಮಗ ವೇದಾಂತ ಜೊತೆ ರಾಜ್ಯಭವನಕ್ಕೆ ಭೇಟಿಯನ್ನು ನೀಡಿ ಸನ್ಮಾನವನ್ನು ಸ್ವೀಕರಿಸಿದ್ದಾರೆ. ಈ ವೇಳೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಉಪಸ್ಥಿತಿಯಲ್ಲಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos