ಬೆಂಗಳೂರು: ಬೆಂಗಳೂರಿಗೆ ವ್ಯಾಪಿಸಿದ ಹನುಮಧ್ವಜ ಕಿಚ್ಚು. ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಹೈಡ್ರಾಮ, ಬಿಜೆಪಿ ಪ್ರತಿಭಟನೆಗೆ ಅನುಮತಿ ನಿರಾಕರಿಸಿದ ಪೊಲೀಸರು ಪೊಲೀಸರ ವಿರುದ್ಧ ಸಿಟ್ಟಿಗೆದ್ದು ಬಿಜೆಪಿಗರು. ಬಿಜೆಪಿ ಪ್ರತಿಭಟನೆಗೆ ಅನುಮತಿಯನ್ನು ನಿರಾಕರಿಸಿದ ಒಂದು ಕಡೆ ಪೊಲೀಸರು. ಪೋಲಿಸ್ನ ವಿರುದ್ಧ ಸಿಟ್ಟಿಗೆದ್ದು ಬಿಜೆಪಿಗರು ಸ್ಥಳದಲ್ಲೇ ಧರಣಿ ನಡೆಸಿದ್ದಾರೆ. ಸರ್ಕಾರ ಹಾಗೂ ಮಂಡ್ಯ ಶಾಸಕ ಗಣಿಗ ರವಿ ವಿರುದ್ಧ ಬಿಜೆಪಿಗರು ಧಿಕ್ಕಾರವನ್ನು ಕೂಗಿದ್ದಾರೆ.
ಪ್ರತಿಭಟನ ನಿರತರನ್ನು ವಶಕ್ಕೆ ಪಡೆದಿರುವಂತಹ ಪೊಲೀಸರು ವಶಕ್ಕೆ ಪಡೆಯಬೇಕಾದರೂ ಕೂಡ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರು ಸ್ಥಳೀಯ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗಿಯಾಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಹೋರಾಟದ ಕಿಡಿ ಹೊತ್ತಿದ್ದು ಮಂಡ್ಯ ದಲ್ಲಿ ಅದರ ಕಂಪನ ನಾವು ಬೆಂಗಳೂರಿನಲ್ಲಿ ನೋಡ್ತಾ ಇದ್ದೀವಿ. ಹೋರಾಟದಲ್ಲಿ ಮಹಿಳೆಯರು ಜೊತೆಗೆ ಯುವಕರು ಇಬ್ಬರು ಕೂಡ ಭಾಗಿಯಾಗಿದ್ದಾರೆ.