ಹ್ಯಾಪಿ ಬಿಗ್‌ಬಾಸ್‌ ಸೀಸನ್‌ 10 ಗೆದ್ದ ಕಾರ್ತಿಕ್

ಹ್ಯಾಪಿ ಬಿಗ್‌ಬಾಸ್‌ ಸೀಸನ್‌ 10 ಗೆದ್ದ ಕಾರ್ತಿಕ್

ಬೆಂಗಳೂರು: ಕನ್ನಡದ ಅತ್ಯಂತ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 10 ಎಲ್ಲಾ ಸೀಸನ್ ಗಳಿಗಿಂತ ಬಿಗ್ ಬಾಸ್ ಸೀಸನ್ 10 ಅತ್ಯಂತ ಹೆಚ್ಚು ಮನರಂಜನೆಯನ್ನು ನೀಡಿತು ಹಾಗೂ ಟೀಕೆಗಳಿಗೂ ಸಹ ಕಾರಣವಾಗಿತ್ತು. ಬಿಗ್ ಬಾಸ್ ಸೀಸನ್ 10 ಪ್ರಾರಂಭವಾದಾಗ  16 ಮಂದಿ ಒಳಗೆ ಹೋಗಿದ್ದರು ಅದರಲ್ಲಿ 10 ಜನ ಸಮರ್ಥರು ಆರು ಜನ ಅಸಮರ್ಥರು ಎನ್ನುವ ರೀತಿ ಈ ಬಾರಿ ಬಿಗ್‌ ಬಾಸ್‌ ಪ್ರಾರಂಭವಾಗಿತ್ತು.

112 ದಿನಗಳ ಸುದೀರ್ಘ ಪಯಣ ನಿನ್ನೆ ಅಂತ್ಯವಾಗಿದೆ. ಬಿಗ್​ಬಾಸ್  ಗೆಲ್ಲಲು 16 ಮಂದಿಯಿಂದ ಪ್ರಾರಂಭವಾದ ಓಟದಲ್ಲಿ ಕೊನೆಯದಾಗಿ ಗೆಲುವು ಕಂಡಿರುವುದು ಕಾರ್ತಿಕ್ ಮಹೇಶ್. ಕೊನೆಯ ಕ್ಷಣದಲ್ಲಿ ಬಿಗ್​ಬಾಸ್​ ಮನೆಗೆ ಬರಲು ತೆಗೆದುಕೊಂಡ ನಿರ್ಣಯ ಅವರ ಕೈಹಿಡಿದಿದೆ. ಹಲವು ಏಳು-ಬೀಳುಗಳಿದ್ದ ಪಯಣದಲ್ಲಿ ಕಾರ್ತಿಕ್ ಮಹೇಶ್ ಗಮ್ಯ ತಲುಪಿದ್ದಾರೆ. ಅವರಿಗೆ ಬರೋಬ್ಬರಿ 2,97,39,904 ಮತ ಗಳಿಸಿದ್ದಾರೆ.

ಸುದೀಪ್ ಅವರು ಸಹ ಕಾರ್ತಿಕ್​ಗೆ ಈ ಬಗ್ಗೆ ಎಚ್ಚರಿಕೆ ನೀಡಿದ್ದರು. ಅದಾದ ಬಳಿಕ ಆಟ ಸುಧಾರಿಸಿಕೊಂಡ ಕಾರ್ತಿಕ್ ಫಿನಾಲೆ ವಾರಕ್ಕೆ ಮುನ್ನ ಮತ್ತೆ ಚಿಗುರಿ ನಿಂತು ವಿನ್ನರ್ ಎನಿಸಿಕೊಂಡಿದ್ದಾರೆ. ತನ್ನ ತಾಯಿಗಾಗಿ ಒಂದು ಮನೆ ಕಟ್ಟಿಕೊಡಬೇಕು ಎಂಬ ಆಸೆಯನ್ನು ಕಾರ್ತಿಕ್ ಹೇಳಿಕೊಂಡಿದ್ದರು. ಅಂತೆಯೇ ಈಗ 50 ಲಕ್ಷ ಗೆದ್ದಿದ್ದಾರೆ. ಜೊತೆಗೆ ಒಂದು ಬ್ರಿಜಾ ಕಾರು ಸಹ ಗೆದ್ದಿದ್ದಾರೆ. ಆರಂಭದಿಂದಲೂ ಚೆನ್ನಾಗಿಯೇ ಆಡಿಕೊಂಡು ಬಂದಿದ್ದ ಡ್ರೋನ್ ಪ್ರತಾಪ್ ಎರಡನೇ ಸ್ಥಾನ ಪಡೆದಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos