ಲಾಲ್ ಬಾಗ್: ನಿನ್ನೆ ಒಂದೇ ದಿನ ಲಕ್ಷ ಜನ ವೀಕ್ಷಣೆ!

ಲಾಲ್ ಬಾಗ್: ನಿನ್ನೆ ಒಂದೇ ದಿನ ಲಕ್ಷ ಜನ ವೀಕ್ಷಣೆ!

ಬೆಂಗಳೂರು: ಈ ಬಾರಿಯ ಫ್ಲವರ್​ ಶೋಗೆ ಸಿಎಂ ಸಿದ್ದರಾಮಯ್ಯ ಅವರು ಚಾಲನೆ ನೀಡಿದ್ದರು. ಬಳಿಕ ಮಾತನಾಡಿದ್ದ ಅವರು, ಬಸವಣ್ಣನವರನ್ನು ಇನ್ಮುಂದೆ ಸಾಂಸ್ಕೃತಿಕ ನಾಯಕ ಎಂದು ಕರೆಯಲಾಗುತ್ತೆ ಅಂತ ಹೇಳಿದ್ದರು.

ಮತ್ತೊಂದೆಡೆ ಫ್ಲವರ್ ಶೋನಲ್ಲಿ, ಇಕೆಬಾನ, ತರಕಾರಿ ಕೆತ್ತನೆ, ಥಾಯ್ ಆರ್ಟ್, ಜಾನೂರು ಮತ್ತು ಪುಷ್ಪ ರಂಗೋಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮವನ್ನ ಚಿತ್ರನಟಿ ತಾರಾ ಉದ್ಘಾಟನೆ ಮಾಡಿದ್ದರು. ಬಳಿಕ ಫ್ಲವರ್ ಶೋ ವೀಕ್ಷಿಸಿದ್ದರು.

ಈ ಬಾರಿಯೂ ಫ್ಲವರ್ ಶೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಮಕ್ಕಳು, ಕಪಲ್ಸ್, ವೃದ್ಧರು, ಮಹಿಳೆಯರು ಸೇರಿದಂತೆ ಕುಟುಂಬ ಸಮೇತರಾಗಿ ಬಂದು ಫ್ಲವರ್ ಶೋ ಎಂಜಾಯ್ ಮಾಡಿದ್ದಾರೆ.

ಗಣರಾಜ್ಯೋತ್ಸವದ ಪ್ರಯುಕ್ತವಾಗಿ ನಗರದ ಸಸ್ಯಕಾಶಿ ಲಾಲ್​ಬಾಗ್​​​​ನಲ್ಲಿ 215ನೇ ಫ್ಲವರ್​ ಶೋ ನಡೆಯುತ್ತಿದೆ. ವೀಕ್​ಎಂಡ್ ಆಗಿರುವುದರಿಂದ ಸಾವಿರಾರು ಜನರು ಫ್ಲವರ್ ಶೋ ವೀಕ್ಷಣೆ‌ ಮಾಡಿದ್ದಾರೆ. ಅದರಲ್ಲಿಯೂ ನಿನ್ನೆ ಗಣರಾಜ್ಯೋತ್ಸವ ಅಂಗವಾಗಿ ಸಾಕಷ್ಟು ಸಂಖ್ಯೆಯಲ್ಲಿ ಜನರು ಲಾಲ್ ಬಾಗ್​ಗೆ ಭೇಟಿ ನೀಡಿದ್ದಾರೆ.

ನಿನ್ನೆ ಒಂದೇ ದಿನ ಲಕ್ಷಕ್ಕೂ ಹೆಚ್ಚು  ಜನರು ಫ್ಲವರ್ ಶೋ ವೀಕ್ಷಣೆ ಮಾಡಿದ್ದಾರೆ.  ಟಿಕೆಟ್ ಮಾರಾಟದಿಂದ 65 ಲಕ್ಷ ರೂ. ಆದಾಯವಾಗಿದೆ. ಈ ಬಾರಿ ಬಸವಣ್ಣ ಮತ್ತು ವಚನ ಸಾಹಿತ್ಯ ವಿಷಯಾಧಾರಿತ ಫಲಪುಷ್ಪ ಪ್ರದರ್ಶನ ಆಯೋಜನೆ ಮಾಡಲಾಗಿದ್ದು, ನಾಳೆ ಕೊನೆಯ ದಿನವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos