ಬೆಂಗಳೂರು: ಶಿವಮೊಗ್ಗದಲ್ಲಿ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಘವೇಂದ್ರರನ್ನು ಗೆಲ್ಲಿಸಲು ಶ್ಯಾಮನೂರು ಕರೆ ನೀಡಿದ್ದರು ಈ ಹಿನ್ನೆಲೆಯಲ್ಲಿ ಇಂದು ಮಾಜಿ ಸಿಎಂ ಯಡಿಯೂರಪ್ಪನವರು ಮಾತನಾಡಿ, ರಾಘವೇಂದ್ರ ಮಾಡಿರುವ ಕೆಲಸ ಮೆಚ್ಚಿ ಅವರನ್ನು ಪುನರಾಯ್ಕೆ ಮಾಡಬೇಕೆಂದು ಹೇಳಿರೋದು ನಮ್ಮ ಸಮಾಜದ ಬಂಧುಗಳಿಗೆ, ಕಾರ್ಯಕರ್ತರಿಗೆ ಸಂತೋಷ ತಂದಿದೆ. ಶಾಮನೂರು ಅವರಂಥ ಹಿರಿಯರು ಆಶೀರ್ವಾದ ಮಾಡಿರೋದು ಸಂತೋಷ ಅದಕ್ಕಾಗಿ ಅವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದರು.