ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣ ಹೆಸರು: ಸಿಎಂ!

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ರಾಯಣ್ಣ ಹೆಸರು: ಸಿಎಂ!

ಬೆಂಗಳೂರು: ಕೆಂಪೇಗೌಡ ರಾಯಣ್ಣ ಬಸವಣ್ಣ ಕನಕದಾಸ ಮಹಾತ್ಮ ಗಾಂಧಿ ವಿವೇಕಾನಂದ ಎಲ್ಲಾ ಮಹಾತ್ಮರ ಆಶಯಗಳು ಸ್ಪೂರ್ತಿಯಾಗಿರಲಿ ಎನ್ನುವ ಕಾರಣಕ್ಕೆ ಅವರ ಹೆಸರುಗಳನ್ನು ಇಡಲಾಗುತ್ತದೆ.

ಖೋಡೆ ವೃತ್ತದಲ್ಲಿ  ಆಯೋಜಿಸಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುಣ್ಯ ಸ್ಮರಣ ದಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಾಲ್ಗೊಂಡು ಮಾತನಾಡಿದರು.

ಸ್ವಾತಂತ್ರ್ಯ ಪ್ರೇಮಿ, ದೇಶಪ್ರೇಮಿ, ಸಂಗೊಳ್ಳಿ ರಾಯಣ್ಣ ನಮ್ಮವರಿಂದಲೇ ಬ್ರಿಟಿಷರಿಗೆ ಹಿಡಿದು ಕೊಡಲಾಯಿತು. ಕುರುಬ ಸಮುದಾಯದವರು ಎನ್ನುವ ಕಾರಣಕ್ಕೆ ನಾವು ಗೌರವಿಸುವುದಲ್ಲ,  ಬದಲಿಗೆ ರಾಯಣ್ಣನ ದೇಶಪ್ರೇಮ ಮತ್ತು ತ್ಯಾಗದ ಕಾರಣದಿಂದಾಗಿ ಅವರನ್ನು ಪ್ರತಿಯೊಬ್ಬರು ಸ್ಮರಿಸಬೇಕು,  ಗೌರವಿಸಬೇಕು.

ಪ್ರತಿ ಮನೆಗಳಲ್ಲೂ ರಾಯಣ್ಣ ಜನಿಸಬೇಕು. ಹುಬ್ಬಳ್ಳಿಯ ವಿಮಾನ ನಿಲ್ದಾನಕ್ಕೆ ರಾಯಣ್ಣ ಹೆಸರಿಡಲು ಕೇಂದ್ರಕ್ಕೆ ಶಿಫಾರಸು ಮಾಡಲಾಗಿದೆ. ಕೆಂಪೇಗೌಡ ಪ್ರಾಧಿಕಾರ ಮಾಡಿದ್ದು ನಾವೇ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡ ಹೆಸರಿಗೆ ಮಾಡಿದ್ದು ಕೂಡ ನಾವೇ .

ಫ್ರೆಶ್ ನ್ಯೂಸ್

Latest Posts

Featured Videos