ಈರುಳ್ಳಿ ಬೆಲೆ ಕುಸಿತ!

ಈರುಳ್ಳಿ ಬೆಲೆ ಕುಸಿತ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ತರಕಾರಿ ಬೆಳೆಗಳಲ್ಲಿ ಬಾರಿ ಇಳಿಕೆ ಕಂಡಿದೆ ಆದರೆ ಈರುಳ್ಳಿ ಬೆಲೆ ಮಾತ್ರ ಉತ್ತಮ ಬೆಲೆ ಇತ್ತು ಆದರೆ ಈಗ ಈರುಳ್ಳಿ ಬೆಲೆಯಲ್ಲಿ ಇಳಿಕೆ ಕಂಡಿದೆ ಇದರಿಂದ ರೈತರು ಕಂಗಾಲಾಗಿದ್ದಾರೆ

ಕೆಲವು ತಿಂಗಳ ಹಿಂದೆ ಬೆಲೆ ಏರಿಕೆ ಮೂಲಕ ಗ್ರಾಹಕರನ್ನು ಕಂಗಾಲಾಗಿಸಿದ್ದ ಈರುಳ್ಳಿ. ಈರುಳ್ಳಿ ಬೆಲೆ ದಿಢೀರ್ ಕುಸಿತವಾಗಿದ್ದು, ಸಣ್ಣ ಗಾತ್ರದ ಈರುಳ್ಳಿಗೆ ಕೆಜಿಗೆ ಒಂದು ರೂಪಾಯಿಗೆ ಇಳಿಕೆಯಾಗಿದೆ. ಇದರಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಮಾರು 6200 ಚೀಲ ಈರುಳ್ಳಿಯನ್ನು ರೈತರು ಮಾರುಕಟ್ಟೆಗೆ ತಂದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಈರುಳ್ಳಿಗೆ ಗರಿಷ್ಠ ದರ 1400 ರೂಪಾಯಿ ಇದೆ.

ಅತ್ಯುತ್ತಮ ದಪ್ಪ ಈರುಳ್ಳಿಗೆ 1200 – 1300 ರೂಪಾಯಿ ಇದೆ. ಉತ್ತಮ ದಪ್ಪ ಈರುಳ್ಳಿಗೆ 1000 – 1100 ರೂ. ಇದೆ. ಮಧ್ಯಮ ಗಾತ್ರದ ಈರುಳ್ಳಿಗೆ 600 – 800 ರೂ, ಸಣ್ಣ ಗಾತ್ರದ ಈರುಳ್ಳಿಗೆ 100 ರಿಂದ 300 ರೂ. ದರ ಇದೆ.

ಬೆಲೆ ಕುಸಿತದಿಂದಾಗಿ ಬೇಸತ್ತ ರೈತರು ಜಮೀನಿನಲ್ಲಿಯೇ ಈರುಳ್ಳಿ ಬಿಡಲು ನಿರ್ಧಿಸಿದ್ದಾರೆ. ಸಾರಿಗೆ ವೆಚ್ಚ ಸಹ ಸಿಗದ ಸ್ಥಿತಿ ಇರುವುದರಿಂದ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸುವುದೇ ವ್ಯರ್ಥ. ಹೀಗಾಗಿ ಹೊಲದಲ್ಲಿಯೇ ಬಿಡುವುದು ಉತ್ತಮ ಎಂಬ ನಿರ್ಧಾರಕ್ಕೆ ರೈತರು ಬಂದಿದ್ದಾರೆ.

 

 

ಫ್ರೆಶ್ ನ್ಯೂಸ್

Latest Posts

Featured Videos