ಬೆಂಗಳೂರು: ಗಣರಾಜ್ಯೋತ್ಸವ ದಿನವನ್ನು ಇಡೀ ದೇಶವೇ ಸಂಭ್ರಮಿಸುತ್ತಿದೆ. ಈ ದಿನ ಗಣರಾಜ್ಯ ದೇಶವಾದ ಐತಿಹಾಸಿಕ ದಿನ ಹಾಗೇ ಸಂವಿಧಾನ ಜಾರಿಗೆ ಬಂದ ದಿನವಾಗಿದೆ. ಗಣರಾಜ್ಯೋತ್ಸವ ಅಂಗವಾಗಿ ದೇಶ ಹಾಗೂ ರಾಜ್ಯದಲ್ಲೇ 75ನೇ ಗಣರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ ಆಚರಿಸಲಾಗಿದೆ.
ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಅಟಲ್ ಬಿಹಾರಿ ವಾಜಪೇಯಿ ಕ್ರೀಡಾಂಗಣದಲ್ಲಿ 105 ಅಡಿ ಎತ್ತರವಿರುವ ತ್ರಿವರ್ಣ ಧ್ವಜವನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಎಂ ಸತೀಶ್ ರೆಡ್ಡಿ ಅವರು ಧ್ವಜಾರೋಹಣ ನೆರವೇರಿಸಿ ಈ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಈ ಸಂದರ್ಭದಲ್ಲಿ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಮಾಜಿ ಪಾಲಿಕೆಯ ಸದಸ್ಯರಾದ ಗುರುಮೂರ್ತಿ ರೆಡ್ಡಿ, ಎಚ್ಎಸ್ಆರ್ ಪೊಡ್ರೆಸನ್ ಅಧ್ಯಕ್ಷರಾದ ಬಿ ಎನ್ ಆರ್ ರೆಡ್ಡಿ, ಚಂದ್ರಶೇಖರ್ ಕೃಷ್ಣಮೂರ್ತಿ, ಬಿಬಿಎಂಪಿಯ ಕಾರ್ಯ ಪಾಲಕ ಅಭಿಯಂತರಾದ ಪಾಪಯ್ಯ ರೆಡ್ಡಿ, ರಾತೋಡ್, ನಾಗರಾಜ್, ರಾಜು, ಆರೋಗ್ಯ ಪರಿವೀಕ್ಷಕರಾದ ವಿನೋದ್, ಹಾಗೂ ಇನ್ನಿತರರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.