ಬೆಂಗಳೂರು: ಪ್ರೊ ಕಬಡ್ಡಿ 10ನೇ ಆವೃತ್ತಿಯಲ್ಲಿ ನಿನ್ನೆ ಪಟ್ನಾ ಪೈರಸ್ ಹಾಗೂ ಬೆಂಗಳೂರು ಬುಲ್ಸ್ ಮುಖಾಮುಖಿಯಾಗಿತ್ತು. ಐದನೇ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್. ಕೊನೆಯ ಮೂರು ನಿಮಿಷದಲ್ಲಿ ಪಟ್ನಾ ಪೈರೇಟ್ಸ್ ಮೇಲೆನ ದಾಳಿಯನ್ನು ತೀವ್ರಗೊಳಿಸಿದ ಬೆಂಗಳೂರು ಬುಲ್ಸ್. ನಿನ್ನೆ ಪ್ರೊ ಕಬಡ್ಡಿ ಪಂದ್ಯದಲ್ಲಿ 35-33 ಅಂಕದ ರೋಚಕ ಜಯ ದಾಖಲಿಸಿದೆ. ಆಲ್ ರೌಂಡ್ ಸಚಿವ್ ನರ್ವಲ್ ಮತ್ತು ಡಿಫೆಂಡರ್ ಸುಜಿತ್ ಸಿಂಗ್ ಅವರ ಅಮೋಘ ಸಾಹಸ ಬುಲ್ಸ್ ಜಯದಲ್ಲಿ ಪ್ರಮುಖ ಪಾತ್ರ ವಹಿಸಿತು.