ಬೆಂಗಳೂರು: ನಮ್ಮ ಸ್ಯಾಂಡಲ್ ವುಡ್ ನಲ್ಲಿ ಅನೇಕ ಪಾರ್ಟಿ ಹಾಡುಗಳು ಬಿಡುಗಡೆಯಾಗಿದೆ. ಅದೇ ತರಹ ಮತ್ತೊಂದು ಹೊಸ ಹಾಡು ಹೊಸ ವರ್ಷಕ್ಕೆ ಬಿಡುಗಡೆಯಾಗುತ್ತಿದೆ. ನೀನಾಸಂ ಸತೀಶ್ ಹಾಗೂ ರಚಿತಾರಾಮ್ “ಅಯೋಗ್ಯ” ಸಿನಿಮಾದಲ್ಲಿ ಒಟ್ಟಿಗೆ ನಟಿಸಿ ಹಿಟ್ ನೀಡಿದ್ದರು. ಅದಾದ ಬಳಿಕ ಇದೀಗ ‘ಮ್ಯಾಟ್ನಿ’ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದೆ.
ಈ ಸಿನಿಮಾದ “ಬಾರೋ ಬಾರೋ ಬಾಟಲ್ ತಾರೋ” ಎಂಬ ಹಾಡೊಂದು ಹೊಸ ವರ್ಷದ ಸಂದರ್ಭದಲ್ಲಿ ಬಿಡುಗಡೆ ಆಗಿದೆ. ನೀನಾಸಂ ಸತೀಶ್ರ ಗೆಳೆಯ ನಟ ಡಾಲಿ ಧನಂಜಯ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಬರೆದು ಸಂಗೀತ ನೀಡಿರುವ ಈ ಹಾಡನ್ನು ಪೂರ್ಣಚಂದ್ರ ತೇಜಸ್ವಿ, ನೀನಾಸಂ ಸತೀಶ್ ಹಾಗೂ ರೀಲ್ ರೀನಾ ಹಾಡಿದ್ದಾರೆ.
ಯುವಪೀಳಿಗೆಯ ಕೇಳುಗರನ್ನು ಸೆಳೆಯುವ ಉದ್ದೇಶದಿಂದ ಕ್ಯಾಚಿ ಲೈನುಗಳನ್ನು ಬಳಸಿಕೊಂಡು ರಚಿಸಿರುವ ಪಾರ್ಟಿ ಹಾಡಿದು. ಹಾಡಿನಲ್ಲಿ ಕುಡಿತದ ಬಗ್ಗೆ ಪಾರ್ಟಿ ಬಗ್ಗೆ ಸಾಲುಗಳಿವೆ. ಈ ಹಾಡಿಗೆ ನೀನಾಸಂ ಸತೀಶ್, ನಾಗಾಭೂಷಣ್ ಹಾಗೂ ಶಿವರಾಜ್ ಕೆ.ಆರ್ ಪೇಟೆ, ಮೈಸೂರು ಪೂರ್ಣ ಹೆಜ್ಜೆ ಹಾಕಿದ್ದಾರೆ. ಹೊಸವರ್ಷದ ಹರುಷವನ್ನು ಹೆಚ್ಚಿಸುವ ಈ ಹಾಡಿಗೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ.