ಗುಜರಾತ್: ಹೊಸವರ್ಷ 2024ರ ಆರಂಭದ ಮೊದಲ ದಿನವೇ ಸೂರ್ಯನಿಗೆ ನಮಸ್ಕಾರ ಮಾಡುವ ಮೂಲಕ ವಿಶ್ವ ದಾಖಲೆಯನ್ನು ಗುಜರಾತ್ ರಾಜ್ಯ ನಿರ್ಮಿಸಿದೆ. ರಾಜ್ಯದ 108 ಐತಿಹಾಸಿಕ ಸ್ಥಳಗಳ ಪೈಕಿ 51 ಸ್ಥಳಗಳಲ್ಲಿ ಸೂರ್ಯ ನಮಸ್ಕಾರ ಮಾಡಲಾಗಿದೆ. ಪ್ರಥಮ ಬಾರಿಗೆ 18 ಸಾವಿರ ಗ್ರಾಮಗಳಲ್ಲಿ 15 ಲಕ್ಷ ಜನರು ಸೂರ್ಯ ನಮಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಇದು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಐತಿಹಾಸಿಕ ದಿನವಾಗಿ ದಾಖಲಾಗಲಿದೆ. ಈ ಕಾರ್ಯಕ್ರಮದಲ್ಲಿ ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ಭಾಗವಹಿಸಿದರು.