ದೇಸಿ ತುಪ್ಪ ಕೇವಲ ಆಹಾರಕ್ಕೆ, ಸಿಹಿ ತಿಂಡಿಗೆ ಮಾತ್ರ ರುಚಿ ಕೊಡುವುದಿಲ್ಲ. ಇದು ಸೌಂದರ್ಯ ಹೆಚ್ಚಿಸಲು ಸಹ ಸಹಕಾರಿಯಾಗಿದೆ. ಪ್ರತೀ ದಿನ ತುಪ್ಪ ಸೇವನೆ ಮಾಡಿದರೆ ಆರೋಗ್ಯಕ್ಕೆ ಹಲವಾರು ಪ್ರಯೋಜನಗಳಿವೆ. ಅಷ್ಟೇ ಯಾಕೆ ಇದರಿಂದ ತ್ವಚೆ ಇನ್ನಷ್ಟು ನಿಖರವಾಗುವುದರಲ್ಲಿ ಸಂಶಯವಿಲ್ಲ. ಹಾಗಿದ್ದರೆ ಬನ್ನಿ ತುಪ್ಪದಿಂದ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ…

ತುಪ್ಪ ನ್ಯಾಚುರಲ್ ಮಾಯಿಶ್ಚರೈಸರ್ ಆಗಿದೆ. ಇದರಿಂದ ಸಾಫ್ಟ್ ಸ್ಕಿನ್ ನಿಮ್ಮದಾಗುತ್ತದೆ.
ತುಪ್ಪದಲ್ಲಿ ಫ್ಯಾಟಿ ಆಸಿಡ್ ಇದೆ. ಇದರಿಂದ ನೀವು ದಿನಪೂರ್ತಿ ಫ್ರೆಶ್ ಆಗಿರಲು ಸಹಾಯವಾಗುತ್ತದೆ.
ಓನ ಚರ್ಮದ ಸಮಸ್ಯೆಯನ್ನು ನಿವಾರಿಸಿ, ಸ್ಕಿನ್ ಮಾಯಿಶ್ಚರೈಸ್ ಆಗಿರಲು ಸಹಾಯ ಮಾಡುತ್ತದೆ. ತುಪ್ಪವನ್ನು ಮುಖಕ್ಕೆ ಹಚ್ಚುವುದರಿಂದ ಇದು ಫೇಸ್ ಮಾಯಿಶ್ಚರೈಸರ್‌ನಂತೆ ಕಾರ್ಯ ನಿರ್ವಹಿಸುತ್ತದೆ.

ವಯಸ್ಸಾಗುವಿಕೆಯ ಲಕ್ಷಣವನ್ನು ಮರೆಮಾಚಲು ತುಪ್ಪ ಒಂದು ನ್ಯಾಚುರಲ್ ಔಷಧಿಯಾಗಿದೆ.
ತುಪ್ಪದಿಂದ ಕಣ್ಣಿನ ಸುತ್ತಲು ಮಸಾಜ್ ಮಾಡುವುದರಿಂದ ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಣೆ ಮಾಡುತ್ತದೆ.
ತುಟಿಗಳು ಒಡೆದು ಹೋಗಿದ್ದರೆ ತುಪ್ಪದಿಂದ ಪ್ರತಿದಿನ ಮಸಾಜ್ ಮಾಡಿ. ಇದರಿಂದ ಸುಕೋಮಲ ತುಟಿ ನಿಮ್ಮದಾಗುತ್ತದೆ.
ಒಡೆದ ಕೂದಲ ಸಮಸ್ಯೆ ನಿವಾರಣೆ ಮಾಡಲು ಸಹಾಯ ಮಾಡುತ್ತದೆ.