ಮೆಗಾಸ್ಟಾರ್ ಮೋಹನ್ ಲಾಲ್ ರಂಬಾನ್ ಪೋಸ್ಟರ್ ಬಿಡುಗಡೆ!

ಮೆಗಾಸ್ಟಾರ್ ಮೋಹನ್ ಲಾಲ್ ರಂಬಾನ್ ಪೋಸ್ಟರ್ ಬಿಡುಗಡೆ!

ಬೆಂಗಳೂರು: ಮಲಯಾಳಂ ಸಿನಿಮಾದಲ್ಲಿ ಮೆಗಾಸ್ಟಾರ್ ಮೋಹನ್ ಲಾಲ್ ಅತ್ಯಂತ ದೊಡ್ಡ ನಟರಾಗಿದ್ದಾರೆ. ಹಾಗೂ ಅತ್ಯಂತ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಮಲಯಾಳಂ ಮೆಗಾಸ್ಟಾರ್ ಮೋಹನ್ ಲಾಲ್ ಅವರು ರಂಬಾನ್ ಎಂಬ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಈ ಚಿತ್ರದ ಮುಹೂರ್ತ ಮತ್ತು ಟೈಟಲ್ ಬಿಡುಗಡೆ ಇತ್ತೀಚೆಗೆ ಕೊಚ್ಚಿಯಲ್ಲಿ ನಡೆದಿದೆ. ಮೋಹನ್ಲಾಲ್ ಚಿತ್ರಗಳಿಗೆ ಮಲಯಾಳಂ ಮಾತ್ರವಲ್ಲದೆ ಕನ್ನಡ, ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹುಭಾಷಾ ಪ್ರೇಕ್ಷಕರಿದ್ದಾರೆ. ಮೋಹನ್ ಲಾಲ್ ಸಿನಿಮಾ ಇಷ್ಟಪಡುವವರಿಗೆ  ಸಿಹಿ ಸುದ್ದಿಯೆಂಬಂತೆ ರಂಬಾನ್ ಎಂಬ ಹೊಸ ಚಿತ್ರದ ಪೋಸ್ಟರ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್ ಅನ್ನು ಮೋಹನ್ಲಾಲ್ ಅವರು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ ನಿಮ್ಮ ಬೆಂಬಲವೇ ನನಗೆ ಪ್ರಪಂಚ ಎಂದು ಮೋಹನ್ ಲಾಲ್ ಟ್ವೀಟ್ ಮಾಡಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos