ಸಿಲಿಕಾನ್‌ ಸಿಟಿಯಲ್ಲಿ ಮತ್ತೊಂದು ಅಗ್ನಿ ದುರಂತ!

ಸಿಲಿಕಾನ್‌ ಸಿಟಿಯಲ್ಲಿ ಮತ್ತೊಂದು ಅಗ್ನಿ ದುರಂತ!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲ್ಲಿ ನೊಡಿದರಲ್ಲಿ ಅಗ್ನಿ ಅವಗಡ ಹೆಚ್ಚಾಗುತ್ತಿದೆ. ಬೆಂಗಳೂರಿನ ಹೊಸಕೆರೆಹಳ್ಳಿಯ ವೀರಭದ್ರನಗರದಲ್ಲಿ ಶ್ರೀನಿವಾಸ್ ಎಂಬುವರಿಗೆ ಸೇರಿದ ಎಸ್​ವಿ ಕೋಚ್ ವರ್ಕ್ಸ್​ನಲ್ಲಿನ ಖಾಸಗಿ ಬಸ್​​ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ಬೆಂಕಿ ಹೊತ್ತಿ ಉರಿಯುವಾಗ ಸ್ಥಳದಲ್ಲಿ 12 ಗ್ಯಾಸ್ ಸಿಲಿಂಡರ್​ಗಳು ಇದ್ದವು. ಅದೃಷ್ಟವಶಾತ್​ ಸಿಲಿಂಡರ್​ಗೆ ಬೆಂಕಿ ತಾಗದಿದ್ದರಿಂದ ಭಾರಿ ಅನಾಹುತ ತಪ್ಪಿದೆ. ಅಲ್ಲದೆ 30 ಬಸ್​ಗಳಲ್ಲಿದ್ದ ಬ್ಯಾಟರಿಗಳನ್ನು ತೆಗೆದಿದ್ದರಿಂದ ಅನಾಹುತ ತಪ್ಪಿದೆ. ಒಂದು ವೇಳೆ ಗ್ಯಾಸ್​​ ಸಿಲಿಂಡರ್​ಗೆ ಬೆಂಕಿ ತಗುಲಿದ್ದರೇ ಭಾರಿ ಅನಾಹುತವೇ ಸಂಭವಿಸುತ್ತಿತ್ತು.

ಕಳೆದ 15 ವರ್ಷಗಳಿಂದ ಕೋಚ್ ವರ್ಕ್ಸ್​​​ನಲ್ಲಿ ಖಾಸಗಿ ಬಸ್​ಗಳನ್ನು​ ರಿಪೇರಿ ಮಾಡಲಾಗುತ್ತಿದೆ. ಇಂದು ಬೆಳಿಗ್ಗೆ 11:30ರ ಸುಮಾರಿಗೆ ಬಸ್​​ವೊಂದರ ತುರ್ತು ನಿರ್ಗಮನ ದ್ವಾರ ದುರಸ್ತಿ ವೇಳೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ. ಕೋಚ್ ವರ್ಕ್ಸ್ ಸಿಬ್ಬಂದಿ ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ.

ನೋಡು ನೋಡುತ್ತಿದ್ದಂತೆ ಬೆಂಕಿ ಸ್ಥಳದಲ್ಲಿ ನಿಲ್ಲಿಸಿದ್ದ 30 ಬಸ್​ಗಳ ಪೈಕಿ 18 ಬಸ್​ಗಳಿಗೆ ಆವರಿಸಿಕೊಂಡಿದೆ. ಇದರಿಂದ 18 ಬಸ್​​ಗಳು ಸುಟ್ಟು ಕರಕಲಾಗಿವೆ. ಇನ್ನು ಎಸಿ ಬಸ್​ಗಳಲ್ಲಿ ಸೀಟ್, ಸ್ಕೀನ್​ಗಳು ಇರುವುದರಿಂದ ಬೆಂಕಿ ಹೆಚ್ಚಾಗಿದೆ. ನಾಲ್ಕು ಬಸ್​ಗಳಿಗೆ ಬೆಂಕಿ ತಗುಲಿಲ್ಲ, 10 ಬಸ್​ಗಳನ್ನು​ ಸಿಬ್ಬಂದಿ ಹೊರತೆಗೆದಿದ್ದರು. ಎಸ್​ವಿ ಕೋಚ್ ವರ್ಕ್ಸ್​ನಲ್ಲಿ 42 ಜನ ಸಿಬ್ಬಂದಿ ಕೆಲಸ ಮಾಡುತ್ತಿದ್ದರು. ಅದೃಷ್ಟವಶಾತ್ ಯಾರಿಗೂ ಏನು ಆಗಿಲ್ಲ. ಇದೀಗ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸ್ಥಳಕ್ಕೆ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಿರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

ನಮ್ಮ ಬಸ್ ಅಪಘಾತವಾಗಿ ಶೇಪ್ ಡ್ಯಾಮೇಜ್ ಆಗಿತ್ತು. ರಿಪೇರಿ ಮಾಡಲು ಕೊಟ್ಟು, ಆರು ತಿಂಗಳಾಗಿತ್ತು. ಇನ್ನೂ ತಯಾರಾಗಿರಲಿಲ್ಲ. ಇನ್ನು ನಾಲ್ಕು ದಿನದಲ್ಲಿ ತಯಾರಾಗುತ್ತೆ ಅಂದಿದ್ದರು. ಇದೀಗ ಬೆಂಕಿ ಅನಾಹುತದಿಂದ 65 ಲಕ್ಷ ರೂ. ನಷ್ಟವಾಯಿತು ಎಂದು ನಿದಾ ಟ್ರಾವೆಲ್ಸ್ ಮಾಲೀಕ ಮಹಮದ್ ಜಬೀ ಉಲ್ಲಾ ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos