ರಾಯಚೂರು: ರಾಷ್ಟ್ರ ಮತ್ತು ರಾಜ್ಯ ರಾಜಕೀಯದಲ್ಲಿ ಬಿಜೆಪಿಯ ಆಪರೇಷನ್ ಧ್ವನಿ ಸುರುಳಿ ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಬೀಸುತ್ತಿದೆ.
ಈ ನಡುವೆ ರುಮಠಕಲ್ ಶಾಸಕನ ಪುತ್ರ ಶರಣಗೌಡ ಪಾಟೀಲ್ ಜತೆ ಯಡಿಯೂರಪ್ಪ ಮಾತುಕತೆ ನಡೆಸುವ ವೇಳೆ ಶಾಸಕ ಕೆ.ಶಿವನಗೌಡ ನಾಯಕ ಭಾಗಿಯಾಗಿದ್ದರು ಎಂಬ ಆರೋಪ ಕೇಳಿಬಂದಿದೆ.
ಸದ್ಯ ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹೆಣೆದ ರಣತಂತ್ರದಲ್ಲಿ ಶಿವನಗೌಡ ನಾಯಕ್ ಭಾಗಿಯಾಗಿದ್ದಾರಂತೆ. ಅಲ್ಲದೇ ಧ್ವನಿ ಸುರುಳಿಯ ಮೂಲಕ ಸಿಲುಕಿಹಾಕಿಕೊಂಡಿದ್ದಾರೆ ಎಂಬ ಆರೋಪಗಳು ಹರಿದಾಡುತ್ತಿವೆ. ಇದರಿಂದ ಕೆ. ಶಿವನಗೌಡ ನಾಯಕ ಅವರ ಶಾಸಕ ಸ್ಥಾನಕ್ಕೆ ಕುತ್ತು ಬರಬಹುದು ಎಂದು ಹೇಳಲಾಗುತ್ತಿದೆ.