ಅನಾನಸ್ ಸೇವನೆಯ ಪ್ರಯೋಜನಗಳು!

ಅನಾನಸ್ ಸೇವನೆಯ ಪ್ರಯೋಜನಗಳು!

ಬೆಂಗಳೂರು: ಇತ್ತೀಚಿನ ಜೀವನದಲ್ಲಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹುದೊಡ್ಡ ಸಮಸ್ಯೆಯಾಗಿದೆ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಮನೆಯಲ್ಲಿ ಸಿಗುವಂತಹ ಪದಾರ್ಥಗಳನ್ನು ಬಳಸಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.
ಪ್ರಕೃತಿ ಸೃಷ್ಠಿಸಿರುವ ಪ್ರತಿಯೊಂದು ವಸ್ತುವೂ ವಿಚಿತ್ರವೇ. ಪ್ರತಿಯೊಂದು ವಸ್ತುವಿನಲ್ಲೂ ಒಂದಿಲ್ಲೊಂದು ವಿಶಿಷ್ಟತೆ ಅಡಗಿರುತ್ತದೆ. ನಮ್ಮಸುತ್ತಲೂ ಇರುವ ಎಲ್ಲಾ ವಸ್ತುಗಳು ಕೂಡಾ ಪ್ರಕೃತಿ ವೈಚಿತ್ರ್ಯಕ್ಕೆ ಸಾಕ್ಷಿಯಾಗಿರುತ್ತದೆ. ಆದರೆ ಆ ವಸ್ತುವಿನ ವಿಶಿಷ್ಟತೆ ಏನು ಎನ್ನುವುದು ನಮಗೆ ತಿಳಿದಿರುವುದಿಲ್ಲ ಅಷ್ಟೇ. ಕೆಲವೊಂದು ವಿಷಯಗಳು ತಿಳಿದಾಗ ಹುಬ್ಬೇರಿಸುವಂತಾಗುತ್ತದೆ. ಇಂದು ನಾವು ಅನಾನಸ್‌ ಹಣ್ಣಿನಲ್ಲಿ ಅಡಗಿರುವ ಒಂದು ಸತ್ಯವನ್ನು ನೊಡೋಣ.
ಅನಾನಸ್ ವಿಶೇಷ ಪೋಷಕಾಂಶವನ್ನು ಹೊಂದಿರುವ ಹಣ್ಣು ಎನ್ನುವುದರಲ್ಲಿ ಎರಡು ಮಾತಿಲ್ಲ. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಆದರೂ ಕೆಲವರಿಗೆ ಈ ಹಣ್ಣು ಇಷ್ಟವಾಗುವುದಿಲ್ಲ. ಅನಾನಸ್ ಬಗ್ಗೆ ಸಾಮಾನ್ಯವಾಗಿ ಕೇಳಿಬರುವ ಒಂದು ವಿಷಯವೆಂದರೆ ಈ ಹಣ್ಣು ಮಾನವ ಮಾಂಸವನ್ನು ತಿನ್ನುತ್ತದೆ ಎನ್ನುವುದು. ಇದು ಕೇಳುವುದಕ್ಕೆ ಬಹಳ ವಿಚಿತ್ರ ಎನಿಸಬಹುದು. ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಬೆಸ್ಟ್ ಹಣ್ಣು ಎಂದೇ ಕರೆಯಲಾಗುತ್ತದೆ.
ಅನಾನಸ್ ತಿಂದ ತಕ್ಷಣ ನಾಲಿಗೆಯಲ್ಲಿ ವಿಚಿತ್ರವಾದ ಜುಮ್ಮೆನಿಸುವ ಭಾವ, ತುರಿಕೆ ಉಂಟಾಗುತ್ತದೆ. ಅನಾನಸ್ ನಮ್ಮ ಬಾಯಿಯಲ್ಲಿರುವ ಪ್ರೋಟೀನ್ ಅನ್ನು ತಿನ್ನುವುದರಿಂದ ಈ ರೀತಿಯ ಸಂವೇದನೆ ಉಂಟಾಗುತ್ತದೆ ಎನ್ನುವುದು ಅನೇಕ ವರದಿಗಳಲ್ಲಿ ಸ್ಪಷ್ಟವಾಗಿದೆ.
ನಮ್ಮ ದೇಹವು ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿದೆ. ಆದ್ದರಿಂದ ಅನಾನಸ್‌ನಲ್ಲಿರುವ ಬ್ರೋಮೆಲಿನ್ ನಿಮ್ಮ ಪ್ರೋಟೀನ್‌ಗಳನ್ನು ಜೀರ್ಣಿಸಿಕೊಳ್ಳಲು ಪ್ರಯತ್ನಿಸುತ್ತದೆ. ಆದರೆ, ಇದು ಹೊಟ್ಟೆಯಲ್ಲಿರುವ ಆಮ್ಲ ಕಿಣ್ವಗಳನ್ನು ನಾಶಪಡಿಸುತ್ತದೆ. ಅನಾನಸ್ ಹಣ್ಣನ್ನು ಬೆರಳ ತುದಿಗೆ ಪ್ರತಿದಿನ ಉಜ್ಜಿದರೆ ನಮ್ಮ ಬೆರಳಚ್ಚು ಕೂಡಾ ಮಾಯವಾಗುತ್ತದೆ ಎಂದು ಹೇಳುತ್ತಾರೆ. ಈ ಸತ್ಯಗಳು ಕೇಳಲು ತುಂಬಾ ವಿಚಿತ್ರ ಎನಿಸಬಹುದು.

ಫ್ರೆಶ್ ನ್ಯೂಸ್

Latest Posts

Featured Videos