ಬೆಂಗಳೂರು: ಬಿಜೆಪಿ ಪಕ್ಷ ತನ್ನ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಕಾಂಗ್ರೆಸ್ ಪಕ್ಷದ ನಮ್ಮ ನೆಚ್ಚಿನ ನಾಯಕರು ಹಾಗೂ ಸಂಸದರಾದ ಶ್ರೀ ರಾಹುಲ್ ಗಾಂಧಿ ರವರ ಬಗ್ಗೆ ಧರ್ಮವಿರೋಧಿತನದ ಪೋಸ್ಟರ್ಗಳನ್ನು ಬಳಸಿದ್ದಾರೆ. ಬಿಜೆಪಿಯವರ ಈ ದುರ್ನಡತೆಯನ್ನು ಖಂಡಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಇಂದು ಮಧ್ಯಾಹ್ನ 12.00 ಗಂಟೆಗೆ ಸ್ವಾತಂತ್ರ್ಯ ಉದ್ಯಾನವನ ದಲ್ಲಿ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಪ್ರತಿಭಟನೆಯಲ್ಲಿ ಮಾನ್ಯ ಸಚಿವರು ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಶ್ರೀ ರಾಮಲಿಂಗಾ ರೆಡ್ಡಿ, ಮಾನ್ಯ ವಿಧಾನ ಪರಿಷತ್ತಿ ಮುಖ್ಯ ಸಚೇತಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಶ್ರೀ ಸಲೀಂ ಅಹ್ಮದ್ ಅವರು, ಸಚಿವರುಗಳು, ಸಂಸದರು, ಶಾಸಕರುಗಳು, ಮಾಜಿ ಶಾಸಕರುಗಳು, ಕೆಪಿಸಿಸಿ ಪದಾಧಿಕಾರಿಗಳು, ಪಕ್ಷದ ಹಿರಿಯ ಮುಖಂಡರುಗಳು ಭಾಗವಹಿಸಲಿದ್ದಾರೆ.