ದಾಲ್ಚಿನ್ನಿ ಆಹಾರದ ಸ್ವಾಧವನ್ನು ಹೆಚ್ಚಿಸುತ್ತದೆ. ಇದನ್ನು ಸೌಂದರ್ಯ ಹೆಚ್ಚಿಸಲು ಸಹ ಬಳಕೆ ಮಾಡಲಾಗುತ್ತದೆ. ಇದರ ಪರಿಮಳದ ಬಗ್ಗೆ ಎರಡು ಮಾತಿಲ್ಲ. ಹೆಚ್ಚಿನ ಜನ ಇದನ್ನು ಚಹಾದ ಜೊತೆ ಬಳಕೆ ಮಾಡುತ್ತಾರೆ. ಆದರೆ ಇದನ್ನು ಹಾಲಿನ ಜೊತೆ ಸೇವನೆ ಮಾಡಿದರೆ ಅರೋಗ್ಯಕ್ಕೆ ಹೆಚ್ಚಿನ ಲಾಭ ಇದೆ.
ಗ್ಯಾಸ್ ಸಮಸ್ಯೆ ಇರುವವರು ಹಾಲಿಗೆ ದಾಲ್ಚಿನ್ನಿ ಹಾಕಿ ಸೇವನೆ ಮಾಡಿದರೆ ಸಮಸ್ಯೆ ನಿವಾರಣೆಯಾಗುತ್ತದೆ. ಜೀರ್ಣಕ್ರಿಯೆ ಉತ್ತಮವಾಗಿರಲು ಸಹ ಇದು ಸಹಾಯ ಮಾಡುತ್ತದೆ.
ನಿದ್ರೆ ಸರಿಯಾಗಿ ಬಾರದೆ ಇದ್ದರೆ ಬಿಸಿ ಹಾಲಿಗೆ ದಾಲ್ಚಿನ್ನಿ ಹಾಕಿ ಸೇವಿಸಿ. ಇದರಿಂದ ಯಾವುದೇ ಟೆನ್ಶನ್ ಇಲ್ಲದೆ ನಿದ್ರೆ ಮಾಡಬಹುದು.

ಬ್ಲಡ್ ಶುಗರ್ ಲೆವೆಲ್ ಕಂಟ್ರೋಲ್ ಮಾಡಲು ದಾಲ್ಚಿನ್ನಿ ಹಾಕಿದ ಹಾಲು ಉತ್ತಮ. ಇದರಿಂದ ಟೈಪ್ 2 ಡಯಾಬಿಟೀಸ್ ಸಮಸ್ಯೆ ನಿವಾರಣೆಯಾಗುತ್ತದೆ.
ಸುಸ್ತು ಕಡಿಮೆಯಾಗುವುದರ ಜೊತೆಗೆ ಸಂಧಿ -ಮೂಳೆ ಮೊದಲಾದ ಸಮಸ್ಯೆಗಳ ನಿವಾರಣೆಗೆ ಇದು ಸಹಾಯ ಮಾಡುತ್ತದೆ. ಆದುದರಿಂದ ಪ್ರತೀ ದಿನ ದಾಲ್ಚಿನ್ನಿ ಹಾಕಿದ ಹಾಲು ಸೇವಿಸಿ. ದಾಲ್ಚಿನ್ನಿ ಹಾಕಿದ ಹಾಲು ಸೇವನೆ ಮಾಡುವುದರಿಂದ ಗ್ಲೋಯಿಂಗ್ ಸ್ಕಿನ್, ಕಲೆ ರಹಿತ ತ್ವಚೆ ನಿಮ್ಮದಾಗುತ್ತದೆ. ಇನ್ನೇಕೆ ತಡ ಇವತ್ತಿನಿಂದಲೇ ದಾಲ್ಚಿನ್ನಿ ಬೆರೆಸಿದ ಹಾಲು ಸೇವಿಸಲು ಆರಂಭಿಸಿ.