ಯಲ್ಲಾಪುರ: ಶಿಕ್ಷಣದೊಂದಿಗೆ ಕ್ರೀಡೆಯು ಆರೋಗ್ಯಯುತ ಸಮಾಜ ನಿರ್ಮಿಸುವಲ್ಲಿ ಸಹಕಾರಿಯಾಗಿದೆ. ಮಕ್ಕಳಿಗೆ ಶೈಕ್ಷಣಿಕವಾಗಿ ಕ್ರೀಡಾಮನೋಭಾವನೆ ಬೆಳೆಯಲು ಸಾಧ್ಯವಾಗುತ್ತದೆ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಎಪಿಎಂಸಿ ರೈತ ಸಭಾಭವನದಲ್ಲಿ ಕರ್ನಾಟಕ ತಂಡ ಪ್ರತಿನಿಧಿಸಿದ ಕ್ರೀಡಾಪಟುಗಳಿಗೆ ಪ್ರಮಾಣಪತ್ರವನ್ನು ಹಾಗೂ ಗೆದ್ದ ತಂಡಕ್ಕೆ ನಗದು ವಿತರಿಸಿದರು.
ಸಚಿವರ ಧರ್ಮಪತ್ನಿ ವನಜಾಕ್ಷಿ ಹೆಬ್ಬಾರ, ಪ.ಪಂ ಅಧ್ಯಕ್ಷೆ ಸುನಂದಾ ದಾಸ್, ಸಿಪಿಆಯ್ ಸುರೇಶ ಯಳ್ಳುರ್, ಉದ್ಯಮಿ ಬಾಲಕೃಷ್ಣ ನಾಯಕ , ಸಾಮಾಜಿಕ ಮುಖಂಡರಾದ ವಿಜಯ ಮಿರಾಶಿ , ಮುರಳಿ ಹೆಗಡೆ, ಪ. ಪಂ. ಸದಸ್ಯ ಸತೀಶ ನಾಯ್ಕ ಕರ್ನಾಟಕ ತಂಡದ ತರಬೇತುದಾರ ದೀಲಿಪ್ ಹಣಬರ್ , ರೊಲರ್ ಸ್ಕೆಟಿಂಗ್ ಕ್ಲಬ್ ಅಧ್ಯಕ್ಷ ಪ್ರಕಾಶ ಶೆಟ್, ಶಿರಸಿ ಸ್ಕೆಟಿಂಗ್ ಕ್ಲಬ್ ಅಧ್ಯಕ್ಷ ಕಿರಣ ಮತ್ತಿತರರಿದ್ದರು.