ರಾಷ್ಟ್ರೀಯ ತಂಬಾಕು ಮುಕ್ತ ಪಟ್ಟಣ ನಮ್ಮ ಗುರಿ

  • In State
  • January 10, 2021
  • 282 Views
ರಾಷ್ಟ್ರೀಯ ತಂಬಾಕು ಮುಕ್ತ ಪಟ್ಟಣ ನಮ್ಮ ಗುರಿ

ಮುದ್ದೇಬಿಹಾಳ: ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿಯಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಪಟ್ಟಣದಲ್ಲಿ ಜಾಥಾ ನಡೆಸಿ, ಗುಲಾಬಿ ಹೂ ನೀಡುವ ಮೂಲಕ ಗುಲಾಬಿ ಆಂದೋಲನ ಮಾಡಿದರು.
ತಂಬಾಕಿನಿಂದ ಆರೋಗ್ಯ ಹಾಳು, ಧೂಮಪಾನ ದೊಡ್ಡ ಪಿಡುಗಾಗಿದ್ದು, ಇದನ್ನು ಎಲ್ಲರೂ ತ್ಯಜಿಸುವ ಮೂಲಕ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಪಣ ತೊಡಬೇಕೆಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸಲಹೆಗಾರ ಡಾ.ಪ್ರಕಾಶ ಚವ್ಹಾಣ ಕರೆ ನೀಡಿದರು.
ಅವರು   ಪಟ್ಟಣದಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಆರೋಗ್ಯ ಇಲಾಖೆಯ ವಿವಿಧ ಘಟಕಗಳ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ತಂಬಾಕು ಬೇಡ, ಗುಲಾಬಿ ಆಂದೋಲನ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ತಂಬಾಕಿನಿಂದ ತಯಾರಾದ ಸಿಗರೇಟು, ಬೀಡಿ, ಗುಟಕಾ ಮತ್ತಿತರ ವಸ್ತುಗಳನ್ನು ಶಾಲೆ, ಕಾಲೇಜುಗಳಿಂದ 200 ಮೀ.ದೂರದಲ್ಲಿ ಮಾರಾಟ ಮಾಡಬೇಕು. ಪ್ರತೀ ಮಾರಾಟ ಅಂಗಡಿಯ ಮುಂದೆ ತಂಬಾಕು ಸೇವನೆಯಿಂದಾಗುವ ಅಪಾಯಗಳ ಬಗ್ಗೆ ಮಾಹಿತಿ ನೀಡು ಫಲಕ ಹಾಕಬೇಕು. 18 ವರ್ಷದೊಳಗಿನ ಮಕ್ಕಳಿಗೆ ತಂಬಾಕಿನ ಉತ್ಪನ್ನಗಳನ್ನು ಮಾರುವಂತಿಲ್ಲ ಎಂದವರು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos