ಹೊಸವರ್ಷ ಸ್ವಾಗತಕ್ಕೆ ರೆಡಿಯಾಗಿವೆ ಕೇಕ್‌ಗಳು

ಹೊಸವರ್ಷ ಸ್ವಾಗತಕ್ಕೆ ರೆಡಿಯಾಗಿವೆ ಕೇಕ್‌ಗಳು

ಶಿರಾ: 2020 ಕಳೆದು 2021ರ ಆಗಮನಕ್ಕೆ ಕೇವಲ ಗಂಟೆಗಳ ಅಂತರ ಇದ್ದು, ಕೋವಿಡ್ ಸೋಂಕಿನಿಂದಾಗಿ ಬೇಸತ್ತಿದ್ದ ಜನರು ಹೊಸ ವರ್ಷವದರೂ ಹರ್ಷ ಮತ್ತು ಸಂಭ್ರಮದಾಯಕವಾಗಿರಲಿ, ಎಲ್ಲೆಡೆ ಆರೋಗ್ಯ ತುಂಬಿರಲಿ ಎಂದು ಹಾರೈಸುತ್ತಿದ್ದಾರೆ.
ಸ್ನೇಹಿತರೊಂದಿಗಿನ ಮೋಜು-ಮಸ್ತಿ, ಸಂಭ್ರಮಕ್ಕೆ ಯುವ ಜನತೆ ವಿವಿಧ ಯೋಜನೆಗಳನ್ನು ರೂಪಿಸಿಕೊಂಡಿದ್ದು, ನಾಲ್ಕು ಜನ ಸ್ನೇಹಿತರು ಸೇರಿದ ಕಡೆಯೆಲ್ಲಾ ಕೊರೋನಾ ಕೊರಗನ್ನು ಹೋಗಲಾಡಿಸಿ, ಸಂಭ್ರಮದಿಂದ ಹೊಸವರ್ಷವನ್ನು ಹೇಗೆ ಸ್ವಾಗತಿಸಬೇಕು ಎನ್ನುವ ವಿಷಯ ಚರ್ಚೆಗೊಳಗಾಗಿದೆ.
ಇದೇ ವೇಳೆ ಹೊಸ ವರ್ಷವನ್ನು ಸ್ವಾಗತಿಸಲು ನಗರದ ವಿವಿಧ ಬೇಕರಿಗಳಲ್ಲಿ ಬಗೆ ಬಗೆಯ ಕೇಕ್‌ಗಳು ತಯಾರಾಗುತ್ತಿದ್ದು, ಇಲ್ಲಿನ ಜ್ಯೋತಿನಗರದ ಅಮರಾಪುರ ರಸ್ತೆ, ಡಿಗ್ರಿ ಕಾಲೇಜು ತಿರುವಿನಲ್ಲಿರುವ ಬೇಕ್ ಪಾಯಿಂಟ್ ಬೇಕರಿ ಮತ್ತು ಕೆಫೆಯಲ್ಲಿ ವಿವಿಧ ಬಗೆಯ ಕೇಕ್‌ಗಳು ಗ್ರಾಹಕರಿಗಾಗಿ ಕಾಯುತ್ತಿವೆ. ಮಕ್ಕಳ ಮೆಚ್ಚಿನ ಕಾರ್ಟೂನ್‌ಗಳು, ವಿವಿಧ ಪ್ರಾಣಿಗಳು, ಗೊಂಬೆಗಳು, ಸಂಗೀತ ಪರಿಕರಗಳು, ಹೃದಯಾಕಾರ ಮೊದಲಾದ ಬಗೆ ಬಗೆಯ ಕೇಕ್‌ಗಳು ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ರೂಪುಗೊಳ್ಳುತ್ತಿವೆ.
ಕ್ರಿಸ್‌ಮಸ್ ಆದ ನಂತರ ಕೇಕ್ ಗೆ ಅಷ್ಟಾಗಿ ಬೇಡಿಕೆ ಇರುತ್ತಿರಲಿಲ್ಲ. ಆದರೆ ಕೆಲ ವರ್ಷಗಳಿಂದ ಹುಟ್ಟುಹಬ್ಬ ಮಾತ್ರವೇ ಅಲ್ಲದೇ, ಸ್ನೇಹ-ಮಿಲನ, ಗೆಲುವಿನ ಆಚರಣೆ, ವಾರಾಂತ್ಯದ ಮೋಜು ಮಸ್ತಿ ಮೊದಲಾಗಿ ಎಲ್ಲ ಬಗೆಯ ಸಂಭ್ರಮದಲ್ಲಿ ಕೇಕ್ ಕತ್ತರಿಸುವುದು ಸಾಮಾನ್ಯ ಅಂಶವಾಗಿ ಬದಲಾಗಿದೆ.
ದಿನದಿಂದ ದಿನಕ್ಕೆ ಕೇಕ್‌ಗೆ ಭರ್ಜರಿ ಬೇಡಿಕೆ ಹೆಚ್ಚುತ್ತಿದ್ದು, ಅದಕ್ಕೆ ಪೂರಕವಾಗಿ ಪ್ರಸ್ತುತ ವರ್ಷ ಗ್ರಾಮಪಂಚಾಯಿತಿ ಚುನಾವಣೆ ಫಲಿತಾಂಶ ಮತ್ತು ಹೊಸ ವರ್ಷ ಎರಡೂ ಒಟ್ಟಿಗೇ ಮೇಳೈಸಿರುವುದು ಕೇಕ್ ವ್ಯಾಪಾರಕ್ಕೆ ತಕ್ಕ ಕಾಲವಾಗಿದೆ. ಬೇಕ್ ಪಾಯಿಂಟ್ ಉತ್ತಮ ಕ್ವಾಲಿಟಿಯ ಬೇಕರಿ ತಿನಿಸುಗಳನ್ನು ತಯಾರಿಸಿ, ಉತ್ತಮ ಬೆಲೆಯಲ್ಲಿ ನೀಡುತ್ತಿದೆ. ಈ ಬಾರಿಯ ಹೊಸ ವರ್ಷಕ್ಕೆ ಬೇಕ್‌ಪಾಯಿಂಟ್ ಕೇಕ್ ಮತ್ತು ತಿನಿಸು ಮೆಲ್ಲುತ್ತಾ ಹೊಸ ವರ್ಷವನ್ನು ಸ್ವಾಗತಿಸೋಣ.

ಫ್ರೆಶ್ ನ್ಯೂಸ್

Latest Posts

Featured Videos