ಮಾಜಿ ಆರ್.ಎಲ್.ಜಾಲಪ್ಪನವರ 96 ನೇ ಜನ್ಮ ಜಯಂತಿ

ಮಾಜಿ ಆರ್.ಎಲ್.ಜಾಲಪ್ಪನವರ  96 ನೇ ಜನ್ಮ ಜಯಂತಿ

ಕೋಲಾರ: ನಗರದ ಹೊರ ವಲಯದ ಟಮಕದಲ್ಲಿ ಮೂರು ದಶಕಗಳ ಹಿಂದೆ ಶ್ರೀ ದೇವರಾಜ ಅರಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಸ್ಥಾಪಿಸಿದ ಅಧ್ಯಕ್ಷ ಆರ್.ಎಲ್. ಜಾಲಪ್ಪನವರ ೯೬ನೇ ಜನ್ಮದಿನವನ್ನು ಸೋಮವಾರ ಆಚರಿಸಲಾಯಿತ. ದಿವಂಗತ ರಾಮಕೃಷ್ಣ ಹೆಗಡೆಯವರು ಸಚಿವ ಸಂಪುಟದಲ್ಲಿ ಸದಸ್ಯರಾಗಿ ಆರ್.ಎಲ್. ಜಾಲಪ್ಪ ೮೦ ರ ದಶಕದಲ್ಲಿ ಕೋಲಾರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಿದರು. ಆ ನಂತರ ದಿನಗಳಲ್ಲಿ ಆರ್.ಎಲ್. ಜಾಲಪ್ಪ ಆಸ್ಪತ್ರೆ ಸ್ಥಾಪಿಸಿದರು.
ಅಂದಿನ ಪ್ರಧಾನಿ ವಿ.ಪಿ.ಸಿಂಗ್ ಆಸ್ಪತ್ರೆಯನ್ನು ಉದ್ಘಾಟಿಸಿದರು. ಕಳೆದ ೧೦ ವರ್ಷಗಳ ಹಿಂದೆ ಕಾಲೇಜು ಡೀಮ್ಡ್ ಯೂನಿವರ್ಸಿಟಿ ಸ್ಥಾನ ಮಾನ ಗಳಿಸಿದೆ, ಇದುವರೆಗೂ ಕಾಲೇಜಿನಲ್ಲಿ ಸಾವಿರಾರು ಮಂದಿ ವೈದ್ಯಕೀಯ ವ್ಯಾಸಂಗ ಮಾಡಿದ್ದಾರೆ. ಎಂ.ಬಿ.ಬಿ.ಎಸ್. ಅಲ್ಲದೆ ನರ್ಸಿಂಗ್ ಬಿ.ಎಸ್ಸಿ., ಸ್ನಾತಕೋತ್ತ ಎಂ.ಬಿ.ಬಿ.ಎಸ್. ವಿಷಯಗಳನ್ನು ಬೋಧಿಸಲಾಗುತ್ತಿದೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಎರಡು ವರ್ಷಗಳ ಹಿಂದೆ ಆರಂಭಿಸಲಾಯಿತು. ಕ್ಯಾನ್ಸರ್ ಚಿಕಿತ್ಸೆಯಲ್ಲದೆ ನಾರಾಯಣ ಹೃದಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿದ್ದು, ಹೃದಯ ಸಂಬಂಧಿಸಿದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಆಸ್ಪತ್ರೆ ಮತ್ತು ಕಾಲೇಜಿನಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕಾಲೇಜಿನ ಸಂಸ್ಥಾಪಕ ಆರ್. ಎಲ್. ಜಾಲಪ್ಪನವರಿಗೆ ೯೬ ವರ್ಷಗಳ ವಯಸ್ಸಾಗಿದ್ದು, ಇಂದು ಶ್ರೀ ದೇವರಾಜ್ ಅರಸ್ ವೈದ್ಯಕೀಯ ಮಹಾ ವಿದ್ಯಾಲಯಕ್ಕೆ ಹೊಂದಿಕೊಂಡಿರುವ ಆರ್ ಎಲ್ ಜಾಲಪ್ಪ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದಲ್ಲಿ ಜನ್ಮದಿನವನ್ನು ಆಚರಿಸಲಾಯಿತು.
ಇಪ್ಪತ್ತು ವರ್ಷ ಸೇವೆಯನ್ನು ಪೂರ್ಣಗೊಳಿಸಿರುವಂತಹ ವೈದ್ಯರುಗಳಾದ ಡಾ|ಹರೇಂದ್ರ ಕುಮಾರ್, ಡಾ|ಶ್ರೀರಾಮುಲು.ಪಿ.ಎನ್ ಮತ್ತು ಡಾ|ಅರುಣ್.ಹೆಚ್.ಎಸ್ ಅಲ್ಲದೇ ಇತರೇ ಸಿಬ್ಬಂದಿಯವರಾದ ಶ್ರೀಮತಿ. ಪದ್ಮಾ ನಂದಕುಮಾರ್, ರಮಣ, ಚಲಪತಿ, ಜಯರಾಮ್.ಎನ್.ವಿ ಮತ್ತು ನಾಗರಾಜ್ ರವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

 

 

ಫ್ರೆಶ್ ನ್ಯೂಸ್

Latest Posts

Featured Videos