ತುಮಕೂರು: ಸಿದ್ದಗಂಗಾ ಮಠದ ವಿದ್ಯಾರ್ಥಿಗಳು ಸಾಮೂಹಿಕವಾಗಿ ಕೇಶಮುಂಡನ ಮಾಡಿಸಿಕೊಳ್ಳುವ ಮೂಲಕ ಶಿವಕ್ಯರಾದ ಡಾ. ಶಿವಕುಮಾರ ಸ್ವಾಮೀಜಿಯವರಿಗೆ ನಮನ ಸಲ್ಲಿಸುತ್ತಿದ್ದಾರೆ.
ಸವಿತಾ ಸಮಾಜದ ವತಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಕೇಶಮುಂಡನೆ ಮಾಡಲಾಗುತ್ತಿದೆ. ಸದ್ಯ ಸಾವಿರಾರು ವಿದ್ಯಾರ್ಥಿಗಳು ಸ್ವ ಇಚ್ಚೆಯಿಂದ ಕೇಶ ಮುಂಡನ ಮಾಡಿಸಿಕೊಳ್ಳುವ ಮೂಲಕ ಶಿವಕುಮಾರ ಸ್ವಾಮೀಜಿಗಳಿಗೆ ಭಕ್ತಿ ಸಮರ್ಪಣೆ ಮಾಡಿದ್ದಾರೆ.
ಈ ಹಿಂದೆ ವಿದ್ಯಾರ್ಥಿಗಳ ಕೇಶಮುಂಡನಕ್ಕೆ ಮಾತೆ ಮಹಾದೇವಿ ಅವರು ವಿರೋಧ ವ್ಯಕ್ತಪಡಿಸಿದ್ದರು. ಸಾಮೂಹಿಕ ಕೇಶಮುಂಡನ ಮೂರ್ಖತನ, ಲಿಂಗಾಯಿತ, ವೀರಶೈವ ಸಮಾಜದ ಪದ್ದತಿಯಲ್ಲಿ ಕೇಶಮುಂಡನೆಗೆ ಅವಕಾಶವಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಮಠದ ಕಿರಿಯ ಶ್ರೀಗಳು ಸಿದ್ದಲಿಂಗಾ ಸ್ವಾಮೀಜಿ, ಶಿವಕುಮಾರ ಸ್ವಾಮೀಜಿಯವರನ್ನು ಹಿಂದು, ಮುಸಲ್ಮಾನ್, ಕ್ರಿಶ್ಚಿಯನ್ ಎಲ್ಲರೂ ಪ್ರೀತಿಸುತ್ತಾರೆ. ಪ್ರತಿ ವರ್ಷದಂತೆ ಈ ವರ್ಷವೂ ಸವಿತಾ ಸಮಾಜದವರು ಮಕ್ಕಳಿಗೆ ಕಟಿಂಗ್ ಮಾಡುತ್ತಾರೆ ಎಂದಿದ್ದರು.