ಕೊಡಿಗೇನಹಳ್ಳಿ:ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿರವ ಕಾರಣ ಕಾಮಗಾರಿ ತಡವಾಗಿದೆ ಮಳೆ ನಿಂತ ತಕ್ಷಣ ರಸ್ತೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಶಾಸಕ ಎಂ.ವಿ ವೀರಭದ್ರಯ್ಯ ಭರಸವೆ ನೀಡಿದರು.
ಹೋಬಳಿಯ ವೀರಾಪುರ ಗ್ರಾಮಕ್ಕೆ ಭೇಟಿ ನೀಡಿ ರಸ್ತೆ ಕಾಮಗಾರಿ ವೀಕ್ಷಣೆ ಮಾಡಿ ಮಾತನಾಡಿದ ಅವರು, ಸರ್ಕಾರದಿಂದ ಯಾವುದೆ ಅನುದಾನ ಇಲ್ಲ, ಆದರೂ ಈ ಭಾಗಕ್ಕೆ ಹೆಚ್ಚು ಒತ್ತು ನೀಡಿದ್ದು, ಚಿಕ್ಕಮಾಲೂರು ಗ್ರಾಮದಿಂದ ವೀರಾಪುರ ಹಾಗೂ ಕಾಳೇನಹಳ್ಳಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿ ಪಡಸಿಲು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ವೆಂಕಟಾಪುರದಿಂದ ತಿಗಳರಹಳ್ಳಿ ಗ್ರಾಮದವರೆಗೆ ರಸ್ತೆ ಅಭಿವೃದ್ಧಿಪಡಿಸಿಲಾಗುವುದು ಎಂದರು.
ಸತತವಾಗಿ ಹತ್ತು ವರ್ಷ ಬರಗಾಲದಿಂದ ತತ್ತರಿಸಿದ್ದದ ರೈತರಿಗೆ ಈ ಬಾರಿ ಉತ್ತಮ ಮಳೆಯಾಗಿದ್ದು ಮೇವಿಗೆ ಕೊರತೆ ಎದುರಾಗುವುದಿಲ್ಲ, ಹಂತ ಹಂತವಾಗಿ ಈ ಭಾಗದ ಸಮಸ್ಯೆ ಬಗೆಹರಿಸುತ್ತೇನೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಸದಸ್ಯ ಕೆ.ಸಿ ನರಸರೆಡ್ಡಿ, ಜಿಪಂ ಎಇಇ ಸುರೇಶ್ ರೆಡ್ಡಿ, ಇಂಜಿನಿಯರ್ ಕೃಷ್ಣಪ್ಪ, ಮುಖಂಡರಾದ ಲೋಕೇಶ್, ಸಿದ್ಧರೆಡ್ಡಿ, ಜಬೀಉಲ್ಲಾ, ದಯಾನಂದ ರೆಡ್ಡಿ, ಟಿ ರಾಮಕೃಷ್ಣಪ್ಪ, ರಮೇಶ್, ಕಾಳೇನಹಳ್ಳಿ ಹರೀಶ್, ಪಿ ರಾಜು ಹಾಗೂ ಗ್ರಾಮಸ್ಥರು ಹಾಜರಿದ್ದರು.