ಹದಗೆಟ್ಟ ರಸ್ತೆ ನಿದ್ದೆಯಿಂದೇಳದ ಅಧಿಕಾರಿಗಳು

ಹದಗೆಟ್ಟ ರಸ್ತೆ ನಿದ್ದೆಯಿಂದೇಳದ ಅಧಿಕಾರಿಗಳು

ಬಾಗೇಪಲ್ಲಿ: ಆಂಧ್ರಪ್ರದೇಶಕ್ಕೆ ಕೊಡಿಕೊಂಡ ಗಡಿ ಕಡೆಗೆ ಹಾಗೂ ತಾಲ್ಲೂಕು ಕೇಂದ್ರ ಸ್ಥಾನದ ಪಕ್ಕದಲ್ಲಿ ಇರುವ ಗೌನಪಲ್ಲಿ, ಯಗವಬಂಡ್ಲಕೆರೆ ಗ್ರಾಮಗಳಿಗೆ ಸಂಪರ್ಕಿಸುವ ರಸ್ತೆ ಕಳೆದ ೮ ವರ್ಷಗಳಿಂದ ಡಾಂಬರಿಕರಣ ಇಲ್ಲದೇ ರಸ್ತೆಯುದ್ದಕ್ಕೂ ಗುಂಡಿಗಳು, ಜಲ್ಲಿ ಕಲ್ಲುಗಳು ಚೆಲ್ಲಾಪಿಲ್ಲಿಯಾಗಿದೆ. ಇದರಿಂದ ಗ್ರಾಮಗಳ ಜನರ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ.

ಪಟ್ಟಣದ ಹೊರವಲಯದ ಕರ‍್ಲಕುಂಟೆಯ ಕಟ್ಟೆ ಮೇಲೆ ಸಂಚರಿಸಲು ಆಗುತ್ತಿಲ್ಲ. ಇಕ್ಕೆಲಗಳಲ್ಲಿ ಕಟ್ಟೆ ಮೇಲೆ ಯಾವುದೇ ಮುಂಜಾಗ್ರತೆ ಇಲ್ಲದೇ ಸುರಕ್ಷತಾ ಕ್ರಮಗಳನ್ನು ಅನುಸರಿಸಿಲ್ಲ. ಅಪ್ಪಿತಪ್ಪಿದರೆ ವಾಹನಗಳನ್ನು ವಾಹನ ಸವಾರರು ಚಲಿಸಿದರೆ ಅಪಾಯ ಗ್ಯಾರಂಟಿ ಆಗಿದೆ. ರಸ್ತೆಯುದ್ದಕ್ಕೂ ಬೃಹತ್ ಗುಂಡಿಗಳು ನಿರ್ಮಾಣ ಆಗಿದೆ. ಗುಂಡಿಗಳಲ್ಲಿ ಮಳೆಯ ನೀರು ತುಂಬಿದ್ದು, ಕೆಸರುಮಯವಾಗಿದೆ. ಜಲ್ಲಿ, ಕಲ್ಲುಗಳಿಂದ ಕೂಡಿದೆ. ರಸ್ತೆಯ ಇಕ್ಕೆಲಗಳಲ್ಲಿ ಜಾಲಿ ಮುಳ್ಳುಗಳು, ಕಳೆ ಗಿಡಗಳು ಬೆಳೆದಿದೆ.

ಆಂಧ್ರಪ್ರದೇಶದ ಕೊಡಿಕೊಂಡ, ಗೋರಂಟ್ಲ ಹಾಗೂ ತಾಲ್ಲೂಕಿನ ಯಗವಬಂಡ್ಲಕೆರೆ, ಗೌನಪಲ್ಲಿ ಗ್ರಾಮಗಳಿಗೆ ಬಸ್ ಸಂಚಾರ ಇಲ್ಲ. ಆಂಧ್ರಪ್ರದೇಶದಿಂದ ಬರುವ ವಾಹನಗಳು ಇದೇ ರಸ್ತೆ ಮೂಲಕ ಪಟ್ಟಣಕ್ಕೆ ಆಗಮಿಸಬೇಕು. ಖಾಸಗಿ ಆಟೋ, ಅಪ್ಪಿ, ಟೆಂಪೋ, ಕಾರುಗಳು ಸೇರಿದಂತೆ ದ್ವಿಚಕ್ರ ವಾಹನಗಳಲ್ಲಿಯೇ ಗ್ರಾಮಸ್ಥರು ಸಂಚರಿಸಬೇಕು. ಸರ್ಕಾರಿ ಕೆಲಸ, ಆಸ್ಪತ್ರೆಗೆ ಬರುವ ಜನರ ಪಾಡು ಹೇಳತೀರದಾಗಿದೆ. ವಾಹನಗಳ ಸವಾರರು ಸರ್ಕಸ್ ಮಾದರಿಯಲ್ಲಿ ಸಂಚರಿಸಬೇಕಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos