ಕೆ.ಆರ್.ಪುರ:ಕೊರೋನಾ ಭೀತಿಯಿಂದಾಗಿ ಕೆಲವರು ಮನೆಯಿಂದ ಹೊರಗೆ ಬರಲೂ ಭಯಪಡುತ್ತಿದ್ದರೆ. ಇನ್ನು ಕೆಲವರು ತಾವು ಮಜಾ ಮಾಡಿ, ಬೇರೆಯವರಿಗೆ ತೊಂದರೆ ಕೊಡಲೆಂದೇ ರಸ್ತೆಗೆ ಇಳಿಯುತ್ತಾರೆ. ಇದೇ ರೀತಿ ಬೇರೆಯವರಿಗೆ ತೊಂದರೆ ನೀಡುತ್ತಾ ಬೆಂಗಳೂರಿನ ಹಳೆ ಮದ್ರಾಸ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ನಾಲ್ವರು ಯುವಕರನ್ನು ಬಂಧಿಸಲಾಗಿದೆ. ರಸ್ತೆಯಲ್ಲಿ ಅಪಾಯಕಾರಿಯಾಗಿ ವ್ಹೀಲಿಂಗ್ ಮಾಡುತ್ತಾ, ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಕೆ.ಆರ್.ಪುರ ಸಂಚಾರಿ ಪೋಲಿಸರು ಬಂಧಿಸಲಾಗಿದೆ.
ಬೆಂಗಳೂರಿನ ಕೃಷ್ಣರಾಜಪುರ ಸಂಚಾರಿ ಠಾಣಾ ವ್ಯಾಪ್ತಿಯ ಹಳೆ ಮದ್ರಾಸ್ ರಸ್ತೆಯಲ್ಲಿ ಬೈಕ್ ವ್ಹೀಲಿಂಗ್ನಲ್ಲಿ ತೊಡಗಿದ್ದ, ನಟ ಯಶ್ ಕಟ್ಟ ಅಭಿಮಾನಿ ಹೊಸಕೋಟೆ ಸುನೀಲ್ (೨೪), ಕೆಂಗೇರಿ ಮಧು (೨೬), ಶಾಮ್ ಪುರ ರಸ್ತೆಯ ಮುಬಾರಕ್ (೧೮) ಹಾಗೂ ಪಿಲಿಯನ್ ರೈಡರ್ ಮೊಹಿನ್ ಖಾನ್ (೧೯) ಅನ್ನು ಬಂದಿಸಿದ್ದು, ಇನ್ನೂ ಕೆಲ ಪುಂಡರು ತಪ್ಪಿಸಿಕೊಂಡಿದ್ದಾರೆ.
ಈ ಬೈಕ್ ವ್ಹೀಲಿಂಗ್ ಬಗ್ಗೆ ಕೆ.ಆರ್.ಪುರ ಸಂಚಾರಿ ಠಾಣಾಧಿಕಾರಿ ಮಹಮ್ಮದ್ ಅವರಿಗೆ ವಿಷಯ ತಿಳಿಯುತ್ತಿದ್ದಂತೆ ಬಲೆ ಬೀಸಿರುವ ಅವರು ವ್ಹೀಲಿಂಗ್ ಮಾಡಲು ಬಳಸುತ್ತಿದ್ದ ೭ ಬೈಕ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಇನ್ನೂ ಇದರಲ್ಲಿ ವಿಶೇಷ ಎಂದರೆ ಹೊಸಕೋಟೆ ಸುನೀಲ್ ಎಂಬ ಆರೋಪಿ ಕೆ.ಜಿ.ಎಫ್ ಚಿತ್ರದಲ್ಲಿ ನಟ ಯಶ್ ಬಳಸಿದ್ದ ದಿಚಕ್ರ ವಾಹನ ರೀತಿಯಲ್ಲೇ ಆಲ್ಟರ್ ಮಾಡಿಸಿದ್ದಾನೆ. ಬಂಧಿತ ಆರೋಪಿಗಳ ವಿರುದ್ಧ ೫ ಪ್ರತ್ಯೇಕ ಪ್ರಕರಣಗಳು ದಾಖಲು ಮಾಡಲಾಗಿದೆ ಎಂದು ಪೋಲಿಸರು ತಿಳಿಸಿದ್ದಾರೆ.