ಉದ್ಯಮಿಗಳಿಗೆ ಧಮ್ಕಿ: ಆಗಂತುಕರ ಬಂಧನ

  • In State
  • August 14, 2020
  • 155 Views
ಉದ್ಯಮಿಗಳಿಗೆ ಧಮ್ಕಿ: ಆಗಂತುಕರ ಬಂಧನ

ತುಮಕೂರು:ನಗರದ ಮಂಡಿಪೇಟೆಯ ಆಯಿಲ್ ಉದ್ಯಮಿಯೊಬ್ಬರ ಮೊಬೈಲ್‌ಗೆ ಅಪರಿಚಿತ ವ್ಯಕ್ತಿಯೊಬ್ಬರು ವಾಟ್ಸಪ್ ಮೂಲಕ ಸಂದೇಶ ಹಾಗೂ ಕರೆಗಳ ಮೂಲಕ ಬೆದರಿಕೆ ಹಾಕಿ ಹಲ್ಲೆಗೆ ಯತ್ನಿಸಿದ್ದ ಆರೋಪಿಗಳನ್ನು ತುಮಕೂರು ನಗರ ಪೊಲೀಸರು ಬಂಧಿಸಿದ್ದಾರೆ.

ಆಗಸ್ಟ್ ೮ ರಂದು ಆಯಿಲ್ ಉದ್ಯಮಿಯೊಬ್ಬರಿಗೆ ಧಮ್ಕಿ ಹಾಕಿ ಇದು ಕೇವಲ ಸ್ಯಾಂಪಲ್ ಅಷ್ಟೆ ನಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಿದ್ದರು. ಅದೇ ರೀತಿಯಾಗಿ ಆಗಸ್ಟ್ ೧೦ ರಂದು ಮಂಡಿಪೇಟೆಯ ಮತ್ತೊಬ್ಬ ಉದ್ಯಮಿಯೊಬ್ಬರಿಗೆ ಇದೇ ರೀತಿ ಸಂದೇಶದ ಮೂಲಕ ಬೆದರಿಕೆ ಹಾಕಿ ೫೦ ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು, ಈ ಸಂಬಂಧ ತುಮಕೂರು ನಗರ ಪೊಲೀಸ್ ಠಾಣೆಯಲ್ಲಿ ಎರಡು ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos