ಈ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎನ್ನುವ ಬೇಡಿಕೆ

  • In State
  • August 12, 2020
  • 221 Views
ಈ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎನ್ನುವ ಬೇಡಿಕೆ

ಮುದ್ದೇಬಿಹಾಳ : ವೃದ್ಧರೊಬ್ಬರ ಶವ ಪೆಟ್ಟಿಗೆಯನ್ನು ಗ್ರಾಮಸ್ಥರು ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಕೊಂಡೊಯ್ದು ಅಂತ್ಯಸಂಸ್ಕಾರ ಮಾಡಿರುವ ಘಟನೆ ತಾಲೂಕಿನ ಬಳವಾಟದಲ್ಲಿ  ನಡೆದಿದೆ.

ಈ ಸಮುದಾಯದ ಯಾರಾದರೂ ಮೃತಪಟ್ಟರೆ ಅವರ ಶವದ ಪೆಟ್ಟಿಗೆಯನ್ನು ಹೊತ್ತುಕೊಂಡು  ಮೈಮೇಲೆ ಎಳೆದುಕೊಂಡೇ ಹಳ್ಳ ದಾಟಬೇಕಾಗಿದೆ. ಮಳೆ ಬಂದರೆ ಸಾಕು ಹಳ್ಳ ತುಂಬಿ ಹರಿಯುತ್ತದೆ. ಈ ಹಳ್ಳ ದಾಟಲು ಕನಿಷ್ಠ 100 ಮೀಟರ್ ನೀರಿನಲ್ಲಿ ಹೋಗಬೇಕಾದ ಅನಿವಾರ್ಯತೆ ಇದೆ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗುತ್ತಿದೆ.

ಇದೇ ಸ್ಥಳದಲ್ಲಿ ಭೋವಿ ಸಮಾಜದ ಸ್ಮಶಾನ ಭೂಮಿ ಇದ್ದು ಮುಸ್ಲಿಂ ಹಾಗೂ ಭೋವಿ ಜನಾಂದದವರಲ್ಲಿ ಯಾರಾದರು ಮೃತಪಟ್ಟರೆ ಪ್ರತಿ ಬಾರಿ ಹಳ್ಳದ ನೀರು ದಾಟುವ ಅನಿವಾರ್ಯತೆ ಇದೆ. ಸರಕಾರ ಈ ಹಳ್ಳಕ್ಕೆ ಸೇತುವೆ ನಿರ್ಮಿಸಬೇಕು ಎನ್ನುವ ಬೇಡಿಕೆ ದಶಕಗಳಿಂದ ಇದ್ದರೂ ಅದು ಈಡೇರಿಲ್ಲ ಎನ್ನುವ ಆರೋಪ ಗ್ರಾಮಸ್ಥರದ್ದಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos