ಪತ್ನಿಗೆ ಪತಿ ಏನ್ ಮಾಡ್ದ ಗೊತ್ತಾ..?

ಪತ್ನಿಗೆ ಪತಿ ಏನ್ ಮಾಡ್ದ ಗೊತ್ತಾ..?

ಮೈಸೂರು,ಫೆ. 1 : ಟಿಕ್ಟಾಕ್ ಮಾಡಿ ಹಂಗಿಸುತ್ತಿದ್ದ ಪತ್ನಿ ವಿರುದ್ಧ ರೊಚ್ಚಿಗೆದ್ದ ಪತಿ, ಪತ್ನಿಯ ಜೀವಹರಣ ಮಾಡಲು ಯತ್ನಿಸಿ ಪೊಲೀಸರಿಗೆ ಶರಣಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಪಿರಿಯಾಪಟ್ಟಣದ ಮಾನಸಾ ವಿದ್ಯಾಸಂಸ್ಥೆಯ ಬಳಿಯ ನಿವಾಸಿಯಾದ ಶ್ರೀನಿವಾಸ್ ಅಲಿಯಾಸ್ ಆಟೋಸೀನಾ ಪತ್ನಿಯ ಜೀವಹರಣ ಮಾಡಲು ಯತ್ನಿಸಿದ್ದಾನೆ.
10 ವರ್ಷದ ಹಿಂದೆ ಸವಿತಾಳನ್ನು ವಿವಾಹವಾಗಿದ್ದ ಶ್ರೀನಿವಾಸ್ಗೆ ಇಬ್ಬರು ಮಕ್ಕಳಿದ್ದರು. ಆದ್ರೆ ಪದೇ ಪದೇ ಜಗಳವಾಗುತ್ತಿದ್ದ ಕಾರಣ, ಪತಿಯ ಜೊತೆ ಜಗಳ ಮಾಡಿ ಪತ್ನಿ ಸವಿತಾ ಬೇರೊಬ್ಬನೊಂದಿಗೆ ವಾಸವಾಗಿದ್ದಳು.
ಆದ್ರೆ ಆಗಾಗ ಸವಿತಾ ಟಿಕ್ಟಾಕ್ ಮಾಡಿ, ಪತಿಯನ್ನ ಹಂಗಿಸುತ್ತಿದ್ದಳು. ಈ ಕಾರಣಕ್ಕೆ ಸಿಟ್ಟಿಗೆದ್ದ ಪತಿ, ಮಕ್ಕಳ ಹುಟ್ಟುಹಬ್ಬಕ್ಕೆ ಪತ್ನಿ ಮನೆಗೆ ಬಂದಾಗ, ಆಕೆಯ ಜೀವಹರಣ ಮಾಡಲು ಯತ್ನಿಸಿ, ಜೈಲು ಪಾಲಾಗಿದ್ದಾನೆ. ಗಾಯಗೊಂಡ ಪತ್ನಿ ಸವಿತಾಳನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos