ಹೊಸಕೋಟೆ, ಜ. 30: ಹಳೆ ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಮಾರಕಸ್ತ್ರಗಳಿಂದ ಹಲ್ಲೆ ಮಾಡಿರುವ ಘಟನೆಯೊಂದು ಹೊಸಕೋಟೆ ತಾಲ್ಲೂಕಿನ ನಂದಗುಡಿಯ ಹೆಚ್ ಕ್ರಾಸ್ ಬಳಿ ನಡೆದಿದೆ. ಲಾಂಗು ಮಚ್ಚುಗಳಿಂದ ಕೊಚ್ಚಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ದುಷ್ಕರ್ಮಿಗಳು. ತರಬಳ್ಳಿ ಗ್ರಾಮ ಪಂಚಾಯತಿ ಸದಸ್ಯ ತ್ಯಾಗರಾಜ್(45) ಎನ್ನುವವರ ಮೇಲೆ ದುಷ್ಕರ್ಮಿಗಳ ಹಲ್ಲೆ ಮಾಡಿದ್ದಾರೆ. ತ್ಯಾಗರಾಜ್ ದ್ವಿಚಕ್ರ ವಾಹನದಲ್ಲಿ ಹೋಗುವಾಗ ವಾಹನಕ್ಕೆ ಅಡ್ಡ ಗಟ್ಟಿ ದಾಳಿ ನಡೆಸಿರುವ ಗ್ಯಾಂಗ್. ಹಲ್ಲೆಗೊಳಗಾದ ಗ್ರಾಮ ಪಂಚಾಯತಿ ಸದಸ್ಯ ತ್ಯಾಗರಾಜ್ ಸ್ಥಿತಿ ಗಂಭಿರವಾಗಿದೆ, ಹೆಚ್ಚಿನ ಚಿಕಿತ್ಸೆಗಾಗಿ ತ್ಯಾಗರಾಜ್ ಗೆ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿರುವ ನಂದಗುಡಿ ಪೋಲಿಸರು.