ಶಾಸಕರನ್ನೇ ಕೂಡಿ ಹಾಕಿ ಪ್ರತಿಭಟನೆ

ಶಾಸಕರನ್ನೇ ಕೂಡಿ ಹಾಕಿ ಪ್ರತಿಭಟನೆ

ಕೊಪ್ಪಳ, ಜ. 27:  ಕೊಪ್ಪಳ ಜಿಲ್ಲೆಯ ಯಲಬುರ್ಗಾ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಶಾಸಕರನ್ನೇ ಕೊಠಡಿಯಲ್ಲಿ ಕೂಡಿ ಹಾಕಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಇಂದು ಯಲಬುರ್ಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸರ್ಕಾರ ಘೋಷಣೆ ಮಾಡಿದಂತೆ ಲ್ಯಾಪ್ ಟಾಪ್ ವಿತರಿಸುವ ಕಾರ್ಯಕ್ರಮ ಆಯೋಜಿಸಾಗಿತ್ತು. ಇಂತಹ ಕಾರ್ಯಕ್ರಮಕ್ಕೆ ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್ ಅವರು ಆಗಮಿಸಿದ್ದರು.

ನಿಗಧಿಯಾಗಿದ್ದ ಕಾರ್ಯಕ್ರಮದಂತೆ ಮೊದಲ ವರ್ಷದ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್ ವಿತರಿಸಿ, ಹೊರಡುವ ವೇಳೆಯಲ್ಲಿ ಶಾಸಕರನ್ನು ಮುತ್ತಿಗೆ ಹಾಕಿದ ದ್ವಿತೀಯ ಹಾಗೂ ಅಂತಿಮ ಪದವಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿಗಳು, ನಮಗೂ ಲ್ಯಾಪ್ ಟಾಪ್ ಕೊಡುವಂತೆ ಒತ್ತಾಯಿಸಿದರು.

ಈ ವೇಳೆ ಸರ್ಕಾರ ಘೋಷಣೆ ಮಾಡಿರೋದು ಮೊದಲ ವರ್ಷದ ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲು ಮಾತ್ರವೇ. ಬೇರಾರಿಗೂ ನೀಡಲು ಸಾಧ್ಯವಿಲ್ಲ ಎನ್ನುತ್ತಲೇ ಸಿಟ್ಟಾದ ವಿದ್ಯಾರ್ಥಿಗಳು, ಶಾಸಕರನ್ನ ಮುತ್ತಿಗೆ ಹಾಕಿ, ಕೊಠಡಿಯಲ್ಲಿ ಕೂಡಿ ಹಾಕಿದ್ದಲ್ಲದೇ, ಬೇಕೆ ಬೇಕು.. ಲ್ಯಾಪ್ ಟಾಪ್ ಬೇಕು.. ನಮಗೂ ವಿತರಿಸದೇ ನಿಮ್ಮನ್ನು ಇಲ್ಲಿಂದ ಕಳಿಸೋದಿಲ್ಲ ಎಂಬುದಾಗಿ ಪ್ರತಿಭಟನೆಗೆ ಇಳಿದರು.

 

 

ಫ್ರೆಶ್ ನ್ಯೂಸ್

Latest Posts

Featured Videos