ಆನೇಕಲ್, ಜ. 27: ತಮಿಳುನಾಡು ಗಡಿಗೆ ಹೊಂದಿಕೊಂಡಿರುವ ಆನೇಕಲ್ ಸುತ್ತಾಮುತ್ತ ಕಾಡಾನೆಗಳ ಹಾವಳಿ, ಪದೇ ಪದೇ ಗ್ರಾಮಸ್ಥರಿಗೆ ಕಾಣಿಸಿಕೊಳ್ಳುತ್ತಿರುವುದು ಸಾಕಷ್ಟು ಭಯಬೀತರನ್ನಾಗಿಸುತ್ತದೆ. ಅದೇ ರೀತಿ ಇಂದೂ ಕೂಡ ತಮಿಳುನಾಡಿನ ಗಡಿಗೆ ಹೊಂದಿಕೊಂಡಿರುವ ಶಾನಮಾವು ಗ್ರಾಮದ ಹೊರವಲಯದಲ್ಲಿ ಮರಿ ಆನೆಯೊಂದು ಒಂಟಿಯಾಗಿ ಕಾಣಿಸಿಕೊಂಡಿರುವುದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.
2 ವರ್ಷದ ಮರಿ ಆನೆಯೊಂದು ಆನೆಗಳ ಗುಂಪನಿಂದ ಬೇರೆಯಾಗಿ ಶಾನಮಾವು ಕೆರೆಯ ಅಂಗಳಲ್ಲಿ ಒಂಟಿಯಾಗಿರುವ ಮರಿಯಾನೆಯೊಂದಿಗೆ ಗ್ರಾಮಸ್ಥರು ಹಿಡಿಯಲು ಮುಂದಾಗಿದ್ದರು, ಆದರೆ ಅವರ ಕೈಗೆ ಸಿಗದೆ ತಪ್ಪಿಸಿಕೊಳ್ಳುತ್ತಿರುವ ಆನೆಮರಿ, ಇದರ ನಡುವೆ ಗ್ರಾಮದ ಯುವಕರು ಆಟಕ್ಕಿಳಿದು ಮರಿ ಆನೆಯೊಂದಿಗೆ ಪೋಟೋಗೆ ಪೋಸ್ ನೀಡುತ್ತಿದ್ದಾರೆ.
ಅಂತಿಮವಾಗಿ ಪಡ್ಡೆ ಹುಡುಗರು ಮರಿಯಾನೆಯನ್ನು ಹಿಡಿದು ಸೆಲ್ಫಿಗೆ ಪೋಸ್ ನೀಡಿ ಖುಷಿ ಪಟ್ಟರು. ವಿಪರ್ಯಾಸವೆಂದರೆ ಗ್ರಾಮಸ್ಥರು ಆನೆ ಮರಿ ತಪ್ಪಿಸಿಕೊಂಡು ಗ್ರಾಮದತ್ತ ಇರುವುದರ ಬಗ್ಗೆ ಸಂಬಂಧಿಸಿದ ಅರಣ್ಯ ಇಲಾಖೆಗೆ ತಿಳಿಸಿದರು ಸಹಾ ಯಾವೊಬ್ಬ ಅಧಿಕಾರಿಗಳು ಸ್ಥಳಕ್ಕೆ ದಾವಿಸದೆ, ಅತ್ತ ಕಡೆ ತಿರುಗಿ ನೋಡದಿರುವುದು ವಿಪರ್ಯಾಸವಾಗಿದೆ.