ಈ ಪಕ್ಷಿ ಕೂಗಿದರೆ ಮನೆಗೆ ನೆಂಟ್ರು ಬರ್ತಾರಾ?

ಈ ಪಕ್ಷಿ ಕೂಗಿದರೆ ಮನೆಗೆ ನೆಂಟ್ರು ಬರ್ತಾರಾ?

ಬೆಂಗಳೂರು, ಜ. 25: ಸಾಮಾನ್ಯವಾಗಿ ನಮ್ಮ ಮನೆಯ ಸುತ್ತಮುತ್ತಲೂ ಕಾಗೆ ಕೂಗಿದರೆ ಯಾರಾದರು ನಮ್ಮ ಮನೆಗೆ ಯಾರಾದರೂ ನೆಂಟರು ಬರುತ್ತಾರೆ ಎಂದು ಹಿಂದಿನ ಕಾಲದಿಂದ ನಂಬಿಕೆ ಇದೆ. ಕಾಗೆ ಅಂದರೆ ಸಾಕು ನಾವೆಲ್ಲರೂ ಅಪಶಕುನ ಎಂದು ಭಾವಿಸಿದ್ದೇವೆ. ಅದರಲ್ಲೂ ನಾವೆಲ್ಲರೂ ಕಾಗೆ ಕೂಗಿದ ಕೂಡಲೇ ಮನೆಗೆ ನೆಂಟರಿಷ್ಟರು ಬರುತ್ತಾರೋ ಎಂದು ಭಾವಿಸುತ್ತೇವೆ. ಇದಕ್ಕೆ ಪುರಾತನ ಕಾಲದಿಂದಲೂ ನಡೆದು ಬಂದ ಸಂಪ್ರದಾಯವೇನಾದರೂ ಇದೆಯಾ ಎಂಬುದು ಮಾತ್ರ ಗೊತ್ತಿಲ್ಲ.

ನಮ್ಮ ಸಿಟಿಯಲ್ಲಿ ಕಾಗೆಗಳು ಕೂಗಿದರೇ ಅದು ಸಾಮಾನ್ಯವಾಗಿದೆ. ಇದಕ್ಕೆ ಯಾರು ಸಹ ತಲೆ ಕೆಡಿಸಿಕೊಳ್ಳೋಕೆ ಹೋಗುವುದಿಲ್ಲ ಕೂಡ. ಆದರೇ ಹಳ್ಳಿಗಳಲ್ಲಿ ಮಾತ್ರ ಹೀಗಲ್ಲ. ಅಲ್ಲಿ ಮನೆ ಮೇಲೆ ಅಥವಾ ಸುತ್ತಮುತ್ತ ಕಾಗೆ ಬಂದು ಕುಳಿತು ಕೂಗಾಡಿದರೇ ನೆಂಟರು ಬರುತ್ತಾರೆ ಎಂಬ ನಂಬಿಕೆ ಇದೆ. ಈ ಹಿಂದೆ ಫೋನು, ಪೋಸ್ಟಾಫೀಸು ಯಾವುದೂ ಇರಲಿಲ್ಲ. ಹೀಗಾಗಿ ಪಕ್ಷಿಗಳ ಮೂಲಕ ಸಂದೇಶ ಕಳಿಸಲಾಗುತ್ತಿತ್ತಂತೆ.

ಅಂದರೆ ಒಂದು ಊರಿನ ಪಕ್ಷಗಳು ಮತ್ತೊಂದು ಊರಿಗೆ ಸಂದೇಶ ಹೊತ್ತು ಸಾಗುತ್ತಿದ್ದವು. ಆದರೇ ಕಾಗೆಗಳಿಗೆ ಒಂದು ವಿಚಿತ್ರ ಸ್ವಭಾವ ಇದೆ. ತಮ್ಮ ಜಾಗಕ್ಕೆ ಬೇರೆ ಪಕ್ಷಿಗಳು ಬಂದಲ್ಲಿ ಕೂಗುವ ಅಭ್ಯಾಸವಿದೆ. ಇದರಿಂದ ಈ ರೀತಿ, ಆ ಬೇರೆ ಊರಿನ ಪಕ್ಷಿಗಳು ಸಂದೇಶ ಹೊತ್ತು ಬಂದಾಗಲೂ ಕಾಗೆಗಳು ಕೂಗುತ್ತಿದ್ದವು. ಹಾಗಾಗಿ ಜನರು ಇದರಿಂದ, ಯಾವುದೋ ಸಂದೇಶ ಬಂದಿದೆ ಎಂಬ ಊಹೆಗೆ ಬರುತ್ತಿದ್ದರು. ಅದೇ ಮುಂದುವರಿದು ಕಾಗೆ ಕೂಗಿದರೇ ಯಾರೋ ನೆಂಟರು ಬರುತ್ತಾರೆ ಎಂಬ ಸಂಪ್ರದಾಯ ಬಂತು.

 

ಫ್ರೆಶ್ ನ್ಯೂಸ್

Latest Posts

Featured Videos