ಕೆ.ಆರ್.ಪುರ, ಜ. 13: ಕೇಂದ್ರ ಸರ್ಕಾರದ ಜನ ವಿರೋಧಿ ಪೌರತ್ವ ಕಾಯ್ದೆಯಾದ ಸಿಎಎ, ಎನ್ ಆರ್ ಸಿ ಹಾಗೂ ಎನ್ ಪಿ ಆರ್ ವಿರೋಧಿಸಿ ಕೆ.ಆರ್.ಪುರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಕೆ.ಆರ್.ಪುರದ ಪೋಲಿಸ್ ಕ್ವಾರ್ಟರ್ಸ್ ಬಳಿ ಇರುವ ಮೈದಾನದಲ್ಲಿ ಬೆಂಗಳೂರು ಪೂರ್ವ ತಾಲ್ಲೂಕು ಪ್ರಗತಿಪರ ಒಕ್ಕೂಟದ ವತಿಯಿಂದ ಹಮ್ಮಿಕೊಂಳ‍್ಳಲಾಗಿದೆ.
ಈ ಬೃಹತ್ ಪ್ರತಿಭಟನೆಯಲ್ಲಿ ಹಿರಿಯ ಸ್ವತಂತ್ರ ಹೋರಾಟಗಾರ ಹೆಚ್.ಎಸ್.ದೊರೆ ಸ್ವಾಮಿ, ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್, ಮಾಜಿ ಭಜರಂಗದಳದ ಸಂಚಾಲಕ ಹಾಗೂ ಸಾಮಾಜಿಕ ಚಿಂತಕ ಮಹೇಂದ್ರ ಕುಮಾರ್, ಸಿಪಿಎಂ ಪಕ್ಷದ ಉಮೇಶ್, ಚಿಂತಕಿ ಭವ್ಯ ನರಸಿಂಹ ಮೂರ್ತಿ, ಲಿಕಿತ್ ಮಯೂರ್ ಕುಮಾರ್, ದಲಿತ ಮುಖಂಡರಾದ ದೊಡ್ಡ ಯಲ್ಲಪ್ಪ, ಗೌರಮ್ಮ, ಎಂ.ಆರ್.ವೆಂಕಟೇಶ್, ಗೋಪಾಲ್ ಗೌಡ, ಅಂತೋಣಿ, ಇಮಾಮ್ ಒ ಖತೀಬ್ ಜಾಮಿಯ ಹಜರತ್ ಬಿಲಾಲ್ ಸದಸ್ಯ ಮೌಲಾನಾ ಮೊಹಮ್ಮದ್ ಝಲ್ಫೇಕಾರ್ ಅಹಮದ್, ಭಾಗವಹಿಸಿದ್ದಾರೆ.