ಏಕದಿನಕ್ಕೆ ಧೋನಿ ವಿದಾಯ

ಏಕದಿನಕ್ಕೆ ಧೋನಿ ವಿದಾಯ

ನವದೆಹಲಿ, ಜ. 10 : ಎರಡು ಬಾರಿಯ ವಿಶ್ವಕಪ್ ವಿಜೇತ ಭಾರತ ತಂಡದ ನಾಯಕ ಎಂಎಸ್ ಧೋನಿ, ಶೀಘ್ರದಲ್ಲಿಯೇ ಏಕದಿನ ಕ್ರಿಕೆಟ್ ಜೀವನಕ್ಕೆ ವಿದಾಯ ಹೇಳಲಿದ್ದಾರೆ ಎಂದು ಟೀಮ್ ಇಂಡಿಯಾ ಕೋಚ್ ರವಿಶಾಸ್ತ್ರಿ ಹೇಳಿದ್ದಾರೆ. ಖಾಸಗಿ ಸಂವಾದ ಕಾರ್ಯಕ್ರಮವೊಂದರಲ್ಲಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ ಅವರು, ಐಸಿಸಿಯ ಚತುರ್ದಿನ ಟೆಸ್ಟ್ ಪ್ರಸ್ತಾಪವನ್ನು ಮೂರ್ಖ ನಿರ್ಧಾರ ಎಂದು ಜರಿದರು.
‘ನಾನು ಧೋನಿಯೊಂದಿಗೆ ಮಾತನಾಡಿದ್ದೇನೆ.

ಈಗಾಗಲೇ ಅವರು ಟೆಸ್ಟ್ಗೆ ನಿವೃತ್ತಿ ಹೇಳಿದ್ದಾರೆ. ಶೀಘ್ರದಲ್ಲಿಯೇ ಏಕದಿನ ಮಾದರಿಗೂ ನಿವೃತ್ತಿ ಘೋಷಣೆ ಮಾಡುತ್ತಾರೆ. ಈಗಾಗಲೇ ಅವರು ಏಕದಿನ ಮಾದರಿಯ ಕ್ರಿಕೆಟ್ನಲ್ಲಿ ತಮ್ಮ ಆಟವನ್ನು ಮುಗಿಸಿದ್ದಾರೆ’ ಎಂದರು. ಧೋನಿಯ ನಿರ್ಧಾರವನ್ನು ಎಲ್ಲರೂ ಸ್ವಾಗತಿಸಬೇಕು. ಒಂದಷ್ಟು ವರ್ಷಗಳ ಕಾಲ ನಿರಂತರವಾಗಿ ಅವರು ಎಲ್ಲ ಮಾದರಿಯ ಕ್ರಿಕೆಟ್ನಲ್ಲೂ ಆಡಿದ್ದರು’ ಎಂದು ಹೇಳಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos