ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೆ ಆಗ್ರಹ

ಶಾಲಾ ಪೂರ್ವ ಶಿಕ್ಷಣ ಬಲವರ್ಧನೆಗೆ ಆಗ್ರಹ

ಬೆಂಗಳೂರು, ಜ. 03: ಶಾಲಾ ಪೂರ್ವ ಶಿಕ್ಷಣದ ಬಲವರ್ಧನೆ ಯಾಗಬೇಕು ಎಂದು ಸಾಮಜಿಕ ಪರಿವರ್ತನಾ ಜನಾಂದೋಲನ ಸರ್ಕಾರಕ್ಕೆ ಆಗ್ರಹಿಸಿದೆ. ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಕ್ಕಳ ರಕ್ಷಣಾ ಆಯೋಗದ ಮಾಜಿ ಅಧ್ಯಕ್ಷೆ ಡಾ. ಕೃಪ ಅಮರ್ ಆಳ್ವ ಮಾತನಾಡಿ 1970ರ ದಶಕದಲ್ಲಿ ಪ್ರಾರಂಭವಾದ ( ಐಸಿಡಿಎಸ್ ) ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಸ್ನೇಹಿ ಸ್ವಂತ ಕಟ್ಟಡಗಳು, ಮೂಲಭೂತ ಸೌಕರ್ಯಗಳು ಮತ್ತು ಗುಣಮಟ್ಟದ ಶಾಲಾಪೂರ್ವ ಶಿಕ್ಷಣ ದೊರೆಯದಿರುವುದು ದುರಾದೃಷ್ಟವಾಗಿದೆ ಎಂದರು.

ಅಂಗನವಾಡಿಗಳಲ್ಲಿ ಮಕ್ಕಳ ದಾಖಲಾತಿ ಕುಂಠಿತಗೊಳ್ಳತ್ತಿದೆ  ಪರಿಣಮಾವಾಗಿ ಆರೋಗ್ಯ ಸೇವೆಗಳಿಂದ ಹಾಗೂ ಪೂರಕ ಪೌಷ್ಠಿಕ ಆಹಾರದಿಂದ  ಮಕ್ಕಳು ವಂಚಿತರಾಗಿ ಅಪೌಷ್ಟಿಕತೆಗೆ ಒಳಗಾಗುತ್ತಿದ್ದಾರೆ ಮುಂದೆ ಇದೇ ಮಕ್ಕಳು ಶಾಲೆಗೆ ದಾಖಲಾಗದೆ ಶಾಲೆಯಿಂದ ಹೊರಗಯಳಿಯುವುದರಿಂದ ಬಾಲಕಾರ್ಮಿಕರಾಗುತ್ತಾರೆ. ಹೆಣ್ಣು ಮಕ್ಕಳು ಬಾಲ್ಯವಿವಾಹಕ್ಕೆ ಬಲಿಯಾಗುತ್ತಾರೆಂದು ಆಗ್ರಹಿಸಿದರು.

ಸರ್ಕಾರ ಲಬ್ಯವಿರುವ ಕಟ್ಟಡಗಳನ್ನು ಜಿಲ್ಲಾ ತರಬೇತಿ ಕೇಂದ್ರಗಳನ್ನಾಗಿಯೂ ಮತ್ತು ಮಾಧರಿ ಅಂಗನವಾಡಿ ಕೇಂದ್ರಗಳನ್ನು ಸರ್ಕಲ್ ಮಟ್ಟದ ಸಂಪನ್ಮೂಲ ಕೇಂದ್ರಗಳನ್ನಾಗಿ ಪರಿವರ್ತಿಸಬೇಕು , ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ಸಮಿತಿಯ ಶಿಫಾರಸ್ಸಿನಂತೆ ಅಂಗನವಾಡಿ ಶಿಕ್ಷಕಿಯರನ್ನು ಶಿಕ್ಷಣದ ಚಟುವಟಿಕೆಗಳನ್ನು ಹೊರತುಪಡಿಸಿ .ಇತರೆ ಯಾವುದೇ ಚಟುವಟಿಗಳಿಗೆ  ನಿಯೋಜಿಸಬಾರದು. ಪರಿಷ್ಕೃತ “ಚಿಲಿಪಿಲಿ” ಪಠ್ಯ ಕ್ರಮವನ್ನು ಅಂತಿಮಗೊಳಿಸಿ  ರಾಜ್ಯದಲ್ಲಿ ಬಾಲ್ಯಾರಂಭದ ಪೋಷಣೆ  ಮತ್ತು ಶಿಕ್ಷಣ ನೀತಿ ( ಇಸಿಸಿಇ ) ಯನ್ನು ಕೂಡಲೇ ಜಾರಿಗೊಳಿಸುವ ವುದು ಸೇರಿದಂತೆ ಮುಂತಾದ ಬೇಡಿಕೆಗಳನ್ನು ಹಿಡೆರಿಸುವಂತೆ ಒತ್ತಾಯಿಸಿದರು. ಒಂದು ವೇಳೆ ನಮ್ಮ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸಿದ್ದಾದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos