ನಾಲ್ವರು ವಿದ್ಯಾರ್ಥಿನಿಯರು ಮದ್ಯಪಾನ

ನಾಲ್ವರು ವಿದ್ಯಾರ್ಥಿನಿಯರು ಮದ್ಯಪಾನ

ನಾಗಪಟ್ಟಣಂ, ಜ. 3 : ನಾಲ್ವರು ವಿದ್ಯಾರ್ಥಿನಿಯರು ಮದ್ಯಪಾನ ಮಾಡುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಕಾಲೇಜು ಆಡಳಿತ ಮಂಡಳಿ ಅವರನ್ನು ಅಮಾನತು ಮಾಡಿದೆ .
ಸ್ನೇಹಿತೆಯ ಹುಟ್ಟುಹಬ್ಬ ಆಚರಿಸಿದ್ದ ವೇಳೆ ಸಹಪಾಠಿಗಳ ಜೊತೆ ಸೇರಿ ನಾಲ್ವರು ವಿದ್ಯಾರ್ಥಿನಿಯರೂ ಮದ್ಯಪಾನ ಮಾಡಿದ್ದರು. ಖುಷಿಗಾಗಿ ವಿದ್ಯಾರ್ಥಿಗಳೇ ಇದನ್ನು ವಿಡಿಯೊ ಮಾಡಿದ್ದರು. ತಿಂಗಳ ಹಿಂದೆ ನಡೆದಿದ್ದ ಈ ಪಾರ್ಟಿಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿತ್ತು.ವಿಡಿಯೊದಲ್ಲಿರುವ ನಾಲ್ವರು ವಿದ್ಯಾರ್ಥಿನಿಯರಲ್ಲಿ ಮೂವರು ಸಮವಸ್ತ್ರ ಧರಿಸಿದ್ದಾರೆ.
ಡಿಸೆಂಬರ್ 24ರಂದು ಈ ವಿಚಾರ ಕಾಲೇಜು ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ. ‘ಕಾಲೇಜಿನ ಹೊರಗೆ ಈ ಆಚರಣೆ ನಡೆದಿದ್ದರೂ ವಿದ್ಯಾರ್ಥಿನಿಯರ ಈ ವರ್ತನೆ ಇತರ ಮೇಲೂ ಪರಿಣಾಮ ಬೀರುತ್ತದೆ ಎಂದು ಅವರ ಕಠಿಣ ಕ್ರಮ ತೆಗೆದುಕೊಂಡಿದ್ದೇವೆ’ ಎಂದು ಆಡಳಿತ ಮಂಡಳಿ ತಿಳಿಸಿದೆ.‘ವಿದ್ಯಾರ್ಥಿನಿಯರ ಭವಿಷ್ಯದ ಬಗ್ಗೆ ನಾವು ವಿಷಾದಿಸುತ್ತೇವೆ.

ಆದರೆ, ಈ ರೀತಿಯ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿ ಅವರ ಭವಿಷ್ಯವನ್ನು ಹಾಳು ಮಾಡಿದವರೆ ಅವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದಷ್ಟೇ ನಾವು ಹೇಳಲು ಸಾಧ್ಯ. ನಮ್ಮ ಶಿಕ್ಷಣ ಸಂಸ್ಥೆಯ ಗೌರವಕ್ಕೆ ಚ್ಯುತಿ ಬರುವ ವಿಚಾರದಲ್ಲಿ ರಾಜಿಯಾಗುವುದಿಲ್ಲ. ಹಾಗಾಗಿ ಅಮಾನತು ಮಾಡಿದ್ದೇವೆ’ ಎಂದು ವಿದ್ಯಾರ್ಥಿನಿಯರು ಓದುತ್ತಿರುವ ಕಾಲೇಜು ಆಡಳಿತ ಮಂಡಳಿ ತಿಳಿಸಿದೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಮದ್ಯಪಾನ ಮಾಡುತ್ತಿರುವ ವಿದ್ಯಾರ್ಥಿನಿಯ ವಿರುದ್ಧ ಅನೇಕರು ಕಮೆಂಟ್ ಮಾಡಿದ್ದು, ಇದು ನಾಚಿಕೆಗೇಡಿನ ಕೆಲಸ ಎಂದು ಕುಟಕಿದ್ದಾರೆ. ಮದ್ಯಪಾನ ಮಾಡುವುದು, ಬಿಡುವುದು ಅವರ ವೈಯಕ್ತಿಕ ವಿಷಯ ಈ ಬಗ್ಗೆ ಕಾಲೇಜು ಕ್ರಮಕೈಗೊಂಡಿರುವುದು ಸರಿಯಲ್ಲ ಎಂದೂ ಕೆಲವರು ಪ್ರತಿಕ್ರಿಯಿಸಿದ್ದಾರೆ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದೆ. ಆದರೆ, ದೂರು ನೀಡದೆ ಯಾವುದೇ ಕ್ರಮಕೈಗೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos