ಬೆಂಗಳೂರು, ಡಿ. 31 : ವರ್ಷದಂದು ಹಾಲು ಉತ್ಪಾದಕರಿಗೆ ಸಿಹಿ ಸುದ್ದಿ.ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ನೀಡಿದೆ. ನಂದಿನ ಹಾಲು ದರ ರೂ.3ಕ್ಕೆ ಏರಿಕೆ. ಬಿಸಿ ಗ್ರಾಹಕರಿಗೆ ಸದ್ಯದಲ್ಲಿಯೇ ಮುಟ್ಟಲಿದ್ದರೇ, ಮತ್ತೊಂದೆಡೆ 2020ರ ಜ.1ರಿಂದ ಪ್ರ.ಲೀ. ಹಾಲಿಗೆ 2 ರೂ.ಪ್ರೋತ್ಸಾಹ ಧನ ಹೆಚ್ಚಳ ಮಾಡಿದೆ.
ಈ ಕುರಿತಂತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ನಗರ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಬಮೂಲ್ ಹಾಲು ಪೂರೈಕೆ ಮಾಡುತ್ತಿದ್ದು, ಉತ್ಪಾದಕರಿಗೆ ಕಳೆದ ಸೆಪ್ಟಂಬರ್ ನಿಂದ ಪ್ರತಿ ಲೀಟರ್ ಗೆ ರೂ.26 ನೀಡಲಾಗುತ್ತಿದೆ.
ಇಂತಹ ಪ್ರೋತ್ಸಾಹ ಧನವನ್ನು ರೂ.2ಕ್ಕೆ ಹೆಚ್ಚಳ ಮಾಡಲಾಗುತ್ತಿದೆ ಎಂದರು. ಹಾಲು ಉತ್ಪಾದಕರಿಗೆ ಹೆಚ್ಚಳ ಮಾಡಲಾಗಿರುವ ರೂ.2 ಪ್ರೋತ್ಸಾಹ ಧನ ಜನವರಿ 1, 2020ರಿಂದ ದೊರೆಯಲಿದೆ. ಈಗಾಗಲೇ ರೂ.26 ಪ್ರತಿ ಲೀಟರ್ ಗೆ ನೀಡಲಾಗುತ್ತಿರುವ ದರದ ಜೊತೆಗೆ, ರೂ.2 ಸೇರಿಸಿ ಜನವರಿ 1, 2020ರಿಂದ ರೂ.28 ದರದಲ್ಲಿ ಹಾಲು ಖರೀದಿಸಲಾಗುತ್ತದೆ.
ಈ ಮೂಲಕ ಹಾಲು ಉತ್ಪಾದಕರಿಗೆ ರೂ.2 ಪ್ರೋತ್ಸಾಹ ಧನವನ್ನು ಏರಿಕೆ ಮಾಡಲಾಗಿದೆ ಎಂಬುದಾಗಿ ಹೇಳಿದ್ದಾರೆ.